ಮೈಸೂರು: ‘ರಾಷ್ಟ್ರೀಯ ಆಸ್ತಿ ನಗದೀಕರಣ (ಎನ್ಎಂಪಿ) ಯೋಜನೆಯಡಿ ದೇಶವನ್ನು ಬಂಡವಾಳಶಾಹಿಗಳಿಗೆ ಒಪ್ಪಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಎಲ್ಲ ಕಾರ್ಮಿಕ ಸಂಘಟನೆಗಳು ಒಂದಾಗಿದ್ದು, 2023ರ ಜ.30ರಂದು ದೆಹಲಿಯಲ್ಲಿ ನಡೆಯಲಿರುವ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಾವೇಶದಲ್ಲಿ ಹೋರಾಟದ ರೂಪುರೇಷೆ ಸಿದ್ಧಪಡಿಸಲಾಗುವುದು’ ಎಂದು ಸಿಐಟಿಯು ರಾಷ್ಟ್ರೀಯ ಕಾರ್ಯದರ್ಶಿ ಕೆ.ಎನ್.ಉಮೇಶ್ ತಿಳಿಸಿದರು.

ನಗರದಲ್ಲಿ ‘ಅಂಚೆ ನೌಕರರ ರಾಷ್ಟ್ರೀಯ ಒಕ್ಕೂಟದಿಂದ (ಎನ್ಎಫ್ ಪಿಇ) ಭಾನುವಾರ ಆಯೋ ಜಿಸಿದ್ದ ರಾಷ್ಟ್ರಮಟ್ಟದ 12ನೇ ಅಧಿವೇಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಬಜೆಟ್ ಅಧಿವೇಶನದ ವೇಳೆ 5 ಲಕ್ಷ ರೈತರು, ಕಾರ್ಮಿಕರು ಹಾಗೂ ಕೂಲಿ ಕಾರ್ಮಿಕರು ಸಂಸತ್ ಚಲೋ ನಡೆಸಲಿದ್ದಾರೆ. ರೈತ ಹೋರಾಟದ ಮಾದರಿಯಲ್ಲಿಯೇ ಕಾರ್ಮಿಕರು ಹೋರಾಟ ನಡೆಸಲಿದ್ದಾರೆ’ ಎಂದರು.

ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಎಸ್.ರಾಜೇಂದ್ರಕುಮಾರ್ ಮಾತನಾಡಿ, ‘ಕೊರಿಯರ್ ಕಂಪನಿಗಳಿಂದಅಂಚೆ ಇಲಾಖೆಯು ಸವಾಲುಗಳನ್ನು ಎದುರಿ ಸುತ್ತಿದೆ. ಗ್ರಾಹಕರ ಅಪೇಕ್ಷೆಗಳಿಗೆ ತಕ್ಕಂತೆ ಕರ್ತವ್ಯದ ಅವಧಿ ಬದಲಿಸಿಕೊಳ್ಳಬೇಕು. ಹೊಸ ಆಲೋಚನೆಗಳಿಂದ ಸೇವೆಯನ್ನು ವಿಸ್ತರಿಸಿ, ಲಾಭ ಗಳಿಕೆ ಹೆಚ್ಚಿಸಬೇಕು’ ಎಂದರು. ಕಾರ್ಯದರ್ಶಿ ಜನಾರ್ದನ್ ಮಜುಂದಾರ್, ಸಿ.ಸಿ.ಪಿಳ್ಳೈ, ಕೆ.ರಾಘವೇಂದ್ರನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.