ಹುಬ್ಬಳ್ಳಿ: ‘ಮುಂದಿನ ನಾಲ್ಕೈದು ವರ್ಷಗಳ ಕಾಲ ರೈಲುಗಳು ತಡವಾಗಿಯೇ ಸಂಚರಿಸುತ್ತವೆ. ಬೇಕಾದರೆ ಸಾರ್ವಜನಿಕರು ಖಾಸಗಿ ಬಸ್ಗಳಲ್ಲಿ ಹೋಗಬಹುದು’ ಎಂದು ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಅಜಯಕುಮಾರ್ ಸಿಂಗ್ ಸೋಮವಾರ ಇಲ್ಲಿ ಖಾರವಾಗಿ ಪ್ರತಿಕ್ರಿಯಿಸಿದರು.

ಭಾರತೀಯ ರೈಲ್ವೆಯ ನೂತನ ವೇಳಾಪಟ್ಟಿ ಬಿಡುಗಡೆ ಮಾಡಿದ ಅವರು ಸುದ್ದಿಗಾರರ ಜತೆ ಮಾತನಾಡಿದರು. ರೈಲುಗಳ ತಡವಾಗುತ್ತಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಸಿಂಗ್ ಈ ಉತ್ತರ ನೀಡಿದರು.

‘ನೈರುತ್ಯ ರೈಲ್ವೆಯ ಶೇ 80ರಷ್ಟು ಹಳಿಗಳು ಏಕಮಾರ್ಗವಾಗಿದ್ದು, ಜೋಡಿ ಮಾರ್ಗವಾಗಲು ಕನಿಷ್ಠ ನಾಲ್ಕೈದು ವರ್ಷ ಬೇಕು. ಉದ್ದೇಶಪೂರ್ವಕವಾಗಿ ಯಾವ ರೈಲುಗಳು ತಡವಾಗಿ ಸಂಚರಿಸುವುದಿಲ್ಲ. ನಮ್ಮ ಸಾಮರ್ಥ್ಯ ಮೀರಿ ಕೆಲಸ ಮಾಡುತ್ತಿದ್ದೇವೆ. ದೇಶದ ಗಡಿಯಲ್ಲಿ ಯೋಧರು ಆಗೊಮ್ಮೆ, ಈಗೊಮ್ಮೆ ಯುದ್ಧ ಮಾಡಿದರೆ, ನಾವು ನಿತ್ಯ ಯುದ್ಧ ಮಾಡಬೇಕಾದ ಪರಿಸ್ಥಿತಿ ಇದೆ’ ಎಂದು ಕೋಪದಲ್ಲಿಯೇ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.