ಬೆಳಗಾವಿ: ‘ಈ ಬಾರಿ ಅಧಿವೇಶನದ ವಿಧಾನ ಪರಿಷತ್ತಿನಲ್ಲಿ ದಿನಕ್ಕೆ 15 ಪ್ರಶ್ನೆಗಳಿಗೆ ಮಾತ್ರ ಉತ್ತರ ನೀಡಲಾಗುವುದು’ ಎಂದು ವಿಧಾನ ಪರಿಷತ್ ಸಭಾಪತಿ ರಘುನಾಥರಾವ್ ಮಲ್ಕಾಪುರೆ ಹೇಳಿದರು.

‘ವಿಧಾನ ಪರಿಷತ್ ಸದಸ್ಯರು 1,452 ಪ್ರಶ್ನೆಗಳನ್ನು ಕೇಳಿದ್ದು, ಅವುಗಳನ್ನು 150ಕ್ಕೆ ಸೀಮಿತಗೊಳಿಸಲಾಗಿದೆ. 902 ಚುಕ್ಕೆ ರಹಿತ ಪ್ರಶ್ನೆಗಳಿಗೆ ಲಿಖಿತ ಉತ್ತರ ನೀಡಲಾಗುವುದು’ ಎಂದು ಅವರು ಸುವರ್ಣ ಸೌಧದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘127 ಗಮನ ಸೆಳೆಯುವ ಸೂಚನೆ ಮಂಡಿಸಲಾಗಿದೆ. ಸಲ್ಲಿಕೆಯಾದ 330 ಅರ್ಜಿಗಳಲ್ಲಿ 51 ಅರ್ಜಿಗಳು ಸಾರ್ವಜನಿಕ ಹಿತಾಸಕ್ತಿ ಒಳಗೊಂಡಿವೆ. ಸಮಯದ ಲಭ್ಯತೆ ನೋಡಿ ಚರ್ಚಿಸಲಾಗುವುದು’ ಎಂದರು.

‘ಎರಡು ಖಾಸಗಿ ವಿಧೇಯಕಗಳನ್ನು ಸದಸ್ಯರಾದ ರವಿಕುಮಾರ್ ಹಾಗೂ ವೆಂಕಟೇಶ್ ಮಂಡಿಸಲು ಅರ್ಜಿ ಸಲ್ಲಿಸಿದ್ದು ಪರಿಶೀಲಿಸಲಾಗುವುದು’ ಎಂದೂ ಅವರು ಹೇಳಿದರು.

‘ಡಿಸೆಂಬರ್ 21ರಂದು ವಿಧಾನ ಪರಿಷತ್ ಸಭಾಪತಿ ಅವಧಿ ಮುಗಿಯಲಿದೆ. ಹೀಗಾಗಿ, ಡಿ.20ರ ಮಧ್ಯಾಹ್ನ 12ರವರಗೆ ನಾಮ ನಿರ್ದೇಶನಕ್ಕೆ ಅವಕಾಶ ಇದೆ. ನಾನು ಈಗಲೂ ಸಭಾಪತಿ ಸ್ಥಾನದಲ್ಲಿರುವ ಕಾರಣ ನನ್ನ ಸ್ಪರ್ಧೆ ಬಗ್ಗೆ ಹೇಳಲಾರೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.