ಬೆಂಗಳೂರು: ‘ಮೊಬೈಲ್ ಆ್ಯಪ್ ಆಧಾರಿತ ಸೇವೆ ಒದಗಿಸುತ್ತಿರುವ ಓಯೊ ಕಂಪನಿ ₹ 35 ಲಕ್ಷ ಬಾಡಿಗೆ ಪಾವತಿಸದೆ ವಂಚಿಸಿದೆ’ ಎಂದು ಆರೋಪಿಸಿ ಹಲಸೂರು ಪೊಲೀಸ್ ಠಾಣೆಯಲ್ಲಿ ರಾಕ್ಸೆಲ್ ಹೋಟೆಲ್ ಮಾಲೀಕ ಬಿಟ್ಜ್ ಫರ್ನಾಂಡಿಸ್ ದೂರು ನೀಡಿದ್ದಾರೆ.

‘ಹೋಟೆಲ್ ಬುಕ್ಕಿಂಗ್ ಸಂಬಂಧ ಓಯೊ ಕಂಪನಿ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಅದರನ್ವಯ ಕಂಪನಿಯವರು ಪ್ರತಿ ತಿಂಗಳು ₹ 7 ಲಕ್ಷ ಬಾಡಿಗೆ ಪಾವತಿಸಬೇಕು. ಆದರೆ, ಐದು ತಿಂಗಳಿನಿಂದ ಬಾಡಿಗೆ ಪಾವತಿಸಿಲ್ಲ’ ಎಂದು ಫರ್ನಾಂಡಿಸ್ ದೂರಿದ್ದಾರೆ.

ಹಲಸೂರು ಪೊಲೀಸರು, ‘ಫರ್ನಾಂಡಿಸ್ ನೀಡಿರುವ ದೂರು ಆಧರಿಸಿ ಓಯೊ ಕಂಪನಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಿತೇಶ್ ಅಗರ್ವಾಲ್ ಸೇರಿದಂತೆ ಏಳು ಮಂದಿ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ವಿಚಾರಣೆಗೆ ಬರುವಂತೆ ನೋಟಿಸ್ ನೀಡಲಾಗಿದೆ’ ಎಂದರು.

‘ದೂರುದಾರರ ದಾಖಲೆಗಳನ್ನು ಪರಿಶೀಲಿಸಲಾಗಿದೆ. ಇದೊಂದು ಸಿವಿಲ್ ವ್ಯಾಜ್ಯ. ಆರೋಪಿಗಳ ಹೇಳಿಕೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.