ಮೈಸೂರು: ಸಂಸತ್ತಿನಲ್ಲಿ ಭದ್ರತಾ ಲೋಪ ಪ್ರಕರಣದ ಆರೋಪಿ ಡಿ.ಮನೋರಂಜನ್ ಅವರಿಗೆ ಪಾಸ್ಗೆ ಶಿಫಾರಸು ಮಾಡಿದ್ದ ಇಲ್ಲಿನ ಸಂಸದ ಪ್ರತಾಪ ಸಿಂಹ ಇದೇ ಮೊದಲ ಬಾರಿಗೆ ಆ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಅಧಿವೇಶನ ಮುಗಿಸಿ ವಾಪಸಾಗಿರುವ ಅವರು ಇಲ್ಲಿ ಪತ್ರಕರ್ತರೊಂದಿಗೆ ಭಾನುವಾರ ಮಾತನಾಡಿ, ಆ ವಿಚಾರದಲ್ಲಿ ಯಾವುದೇ ವಿವರಣೆ ಕೊಡುವುದಿಲ್ಲ. ಆ ಪ್ರಶ್ನೆ ಬಿಟ್ಟು ಬೇರೆ ಏನಾದರೂ ಇದ್ದರೆ ಕೇಳಿ' ಎಂದರು.

'ಪ್ರತಾಪ ಸಿಂಹ ದೇಶದ್ರೋಹಿಯೇ ಅಥವಾ ದೇಶಪ್ರೇಮಿಯೇ ಎನ್ನುವುದು ಬೆಟ್ಟದ ಚಾಮುಂಡಿ ತಾಯಿ ಹಾಗೂ ಕೊಡಗಿನ ಕಾವೇರಿ ತಾಯಿಗೆ ಗೊತ್ತು. ನನ್ನ ಲೇಖನಗಳನ್ನು ಓದಿದ ಓದುಗರಿಗೆ ಗೊತ್ತು' ಎಂದು ಹೇಳಿದರು.

'ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಜನರು ಮುಂಬರುವ ಚುನಾವಣೆಯಲ್ಲಿ ತೀರ್ಪು ನೀಡುತ್ತಾರೆ.

ನಾನು ದೇಶಪ್ರೇಮಿಯೋ ಅಥವಾ ದೇಶದ್ರೋಹಿಯೋ ಎಂದು ತೀರ್ಮಾನ ಮಾಡುತ್ತಾರೆ. ಈ ವಿಚಾರದಲ್ಲಿ ಇಷ್ಟು ಮಾತ್ರವೇ ಹೇಳುತ್ತೇನೆ. ಆ ಬಗ್ಗೆ ಇನ್ನೇನೂ ಕೇಳಬೇಡಿ' ಎಂದಷ್ಟೆ ಪ್ರತಿಕ್ರಿಯಿಸಿದರು.

ಹಿಜಾಬ್ ನಿಷೇಧದ ಕುರಿತು ಪ್ರತಿಕ್ರಿಯಿಸಿದ ಅವರು, ಇದು ಹಿಂದೂ- ಮುಸ್ಲಿಂ ಎಂಬ ವಿಚಾರವಲ್ಲ. ವಸ್ತ್ರ ಸಂಹಿತೆ ಎಂದಿರುತ್ತದೆ. ಅದನ್ನು ಪಾಲಿಸಬೇಕಷ್ಟೆ ಎಂದು ಹೇಳಿದರು.
.ಸಂಸತ್ ಭದ್ರತಾ ಲೋಪ: ವಕೀಲರನ್ನು ಭೇಟಿ ಮಾಡಲು ನೀಲಂ ದೇವಿಗೆ ಅನುಮತಿ.ಲೋಕಸಭೆಯಲ್ಲಿ ಭದ್ರತಾ ಲೋಪ: ಸಂಸತ್ ಭವನದ ರಕ್ಷಣೆ ‘ಸಿಐಎಸ್ಎಫ್' ಹೆಗಲಿಗೆ?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.