ನವದೆಹಲಿ: ಕರ್ನಾಟಕದ ಬಾಗಲಕೋಟೆ, ಬಳ್ಳಾರಿ, ಹಾಸನ ಸೇರಿದಂತೆ 16 ನಗರ ಹಾಗೂ ಪಟ್ಟಣಗಳು ಶೀಘ್ರದಲ್ಲಿ ಖಾಸಗಿ ಎಫ್‌ಎಂ ರೇಡಿಯೊ ಚಾನೆಲ್‌ಗಳನ್ನು ಹೊಂದಲಿವೆ.

234 ನಗರಗಳಲ್ಲಿ 730 ಚಾನೆಲ್‌ಗಳಿಗೆ ‘ಖಾಸಗಿ ಎಫ್‌ಎಂ ರೇಡಿಯೊ ಹಂತ–3 ನೀತಿ’ಯ ಅಡಿಯಲ್ಲಿ ಅಂದಾಜು ಮೀಸಲು ₹784.87 ಕೋಟಿ ವೆಚ್ಚದಲ್ಲಿ 3ನೇ ಆವೃತ್ತಿಯ ಆರೋಹಣ ರೀತಿಯ ಇ-ಹರಾಜು ಪ್ರಕ್ರಿಯೆಗಳನ್ನು ನಡೆಸುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಹೊರತುಪಡಿಸಿ ಎಫ್‌ಎಂ ಚಾನೆಲ್‌ನ ವಾರ್ಷಿಕ ಪರವಾನಗಿ ಶುಲ್ಕವನ್ನು (ಎಎಲ್‌ಎಫ್) ಒಟ್ಟು ಆದಾಯದ ಶೇ 4ರಂತೆ ವಿಧಿಸುವ ಪ್ರಸ್ತಾವನೆಗೆ ಸಂಪುಟ ಅನುಮೋದನೆ ನೀಡಿದೆ. ಇದು 234 ನಗರಗಳು / ಪಟ್ಟಣಗಳಿಗೆ ಅನ್ವಯಿಸುತ್ತದೆ. ಇಲ್ಲಿಯವರೆಗೆ, ಈ ನಗರಗಳು ಮತ್ತು ಪಟ್ಟಣಗಳಲ್ಲಿ ಯಾವುದೇ ಎಫ್‌ಎಂ ಚಾನೆಲ್‌ಗಳು ಇರಲಿಲ್ಲ.

ಕೇಂದ್ರದ ತೀರ್ಮಾನದಿಂದಾಗಿ, ಇನ್ನೂ ಖಾಸಗಿ ಎಫ್‌ಎಂ ರೇಡಿಯೊ ಪ್ರಸಾರದಿಂದ ವಂಚಿತ ಪ್ರದೇಶಗಳಲ್ಲಿ ಮತ್ತು ಹೊಸ /ಸ್ಥಳೀಯ ವಿಷಯವನ್ನು ಮಾತೃಭಾಷೆಯಲ್ಲಿ ಪ್ರಸಾರ ಮಾಡುವ ಅವಕಾಶ ಲಭ್ಯವಾಗಲಿದೆ. ಇದು ಹೆಚ್ಚಿನ ಉದ್ಯೋಗ ಸೃಷ್ಟಿಗೆ ಕಾರಣವಾಗುತ್ತದೆ. ಸ್ಥಳೀಯ ಮಾತೃ/ಆಡುಭಾಷೆ ಮತ್ತು ಸಂಸ್ಕೃತಿಗೆ ಉತ್ತೇಜನ ನೀಡುತ್ತದೆ. ದೇಶದಲ್ಲಿ ಎಫ್‌ಎಂ ವಾಹಿನಿಗಳ ವಿಸ್ತರಣೆಗೆ ನೆರವಾಗಲಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತಿಳಿಸಿದೆ.

ಎಲ್ಲೆಲ್ಲಿ ಚಾನೆಲ್: ಬಾಗಲಕೋಟೆ (3 ಎಫ್‌ಎಂ ಚಾನೆಲ್‌ಗಳು), ಬೆಳಗಾವಿ (4), ಬಳ್ಳಾರಿ (4), ಬೀದರ್ (3), ವಿಜಯಪುರ (4), ಚಿಕ್ಕಮಗಳೂರು (3), ಚಿತ್ರದುರ್ಗ (3), ದಾವಣಗೆರೆ (4) ಗದಗ ಬೆಟಗೇರಿ (3), ಹಾಸನ (3), ಹೊಸಪೇಟೆ (3), ಕೋಲಾರ (3), ರಾಯಚೂರು (3), ಶಿವಮೊಗ್ಗ (4), ತುಮಕೂರು (3) ಮತ್ತು ಉಡುಪಿ (3).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.