ಬೆಂಗಳೂರು: ಏಕಗವಾಕ್ಷಿ ಯೋಜನೆಯಡಿ ಆಯ್ಕೆಯಾದ 2020ರ ಪುಸ್ತಕಗಳ ಖರೀದಿ ಪ್ರಕ್ರಿಯೆ ಯನ್ನು ಈವರೆಗೂ ಪೂರ್ಣಗೊಳಿಸದ ಸಾರ್ವಜನಿಕ ಗ್ರಂಥಾಲಯ ಇಲಾಖೆ, ಪುಸ್ತಕಗಳ ಪ್ರತಿಗಳು ಗೋದಾಮಿಗೆ ಸರಬರಾಜಾಗಿ ಹಲವು ತಿಂಗಳು ಕಳೆದ ಬಳಿಕ ಅವುಗಳ ಗುಣಮಟ್ಟಕ್ಕೆ ಸಂಬಂಧಿಸಿದಂತೆ ‘ಅಫಿಡವಿಟ್’ (ಪ್ರಮಾಣಪತ್ರ) ಸಲ್ಲಿಸಲು ಸೂಚಿಸಿದೆ.

ಪುಸ್ತಕಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡು ಎರಡು ವರ್ಷಗಳು ಕಳೆದರೂ ಅನುದಾನದ ಕೊರತೆಯಿಂದ ಖರೀದಿ ಪ್ರಕ್ರಿಯೆ ಪೂರ್ಣ ಪ್ರಮಾಣದಲ್ಲಿ ನಡೆದಿಲ್ಲ. ಈ ವರ್ಷಾರಂಭದಲ್ಲಿ ಲಭ್ಯವಿದ್ದ ₹8.5 ಕೋಟಿ ಅನುದಾನದಲ್ಲಿ ಪುಸ್ತಕಗಳ ಖರೀದಿ ನಡೆಸಿದ್ದ ಇಲಾಖೆ, ಅರ್ಧಕ್ಕೂ ಅಧಿಕ ಪುಸ್ತಕಗಳ ಪ್ರತಿಗಳನ್ನು ಕಳೆದ ಮಾರ್ಚ್ನಿಂದ ತನ್ನ ಗೋದಾಮಿನಲ್ಲಿಯೇ ಇರಿಸಿ ಕೊಂಡಿದೆ. ಈಗ ಆ ಪುಸ್ತಕ ಗಳನ್ನು ₹13.5 ಕೋಟಿಯಲ್ಲಿ ಖರೀದಿಗೆ ಮುಂದಾಗಿದ್ದು, ಪುಸ್ತಕಗಳ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಪ್ರಕಾಶಕರಿಗೆ ₹100 ಮೊತ್ತದ ಸ್ಟ್ಯಾಂಪ್ ಪೇಪರ್ನಲ್ಲಿ ಮುಚ್ಚಳಿಕೆ ಸಲ್ಲಿಸಲು ಸೂಚಿಸಿದೆ. ಈಗಾಗಲೇ ಕೆಲವು ಪುಸ್ತಕಗಳ ಖರೀದಿ ನಡೆದಿದ್ದು, ಇನ್ನೊಂದು ಹಂತದ ಖರೀದಿಯ ಹಣ ಪಾವತಿಗೆ ಈ ಪ್ರಕ್ರಿಯೆ ಅನುಸರಿಸುತ್ತಿರುವುದು ಪ್ರಕಾಶಕರ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

2020ನೇ ಸಾಲಿನ ಪುಸ್ತಕ ಖರೀದಿಗೆ 4,791 ಶೀರ್ಷಿಕೆಗಳು ಆಯ್ಕೆಯಾಗಿದ್ದವು. ಇಷ್ಟು ಪುಸ್ತಕಗಳ ತಲಾ 300 ಪ್ರತಿಗಳನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆ ಖರೀದಿಸಿ, ರಾಜ್ಯದ ಗ್ರಂಥಾಲಯಗಳಿಗೆ ಪೂರೈಕೆ ಮಾಡಬೇಕಾಗಿತ್ತು. ಆದರೆ, ಖರೀದಿ ಪ್ರಕ್ರಿಯೆ ಸಮರ್ಪಕವಾಗಿ ನಡೆಯದಿ ದ್ದರಿಂದ ಇನ್ನೂ 2020ರ ಪುಸ್ತಕಗಳು ಗ್ರಂಥಾಲಯಗಳಿಗೆ ಪೂರೈಕೆಯಾಗಿಲ್ಲ.

ಇನ್ನಷ್ಟು ವಿಳಂಬ: ಯೋಜನೆಯಡಿ ಆಯ್ಕೆಯಾದ ಪುಸ್ತಕಗಳನ್ನು ಸ್ವೀಕರಿಸುವ ವೇಳೆ ಇಲಾಖೆಯು ಸಂಬಂಧಿಸಿದ ಪ್ರಕಾಶಕರಿಗೆ ಆಯ್ಕೆಯಾದ ಪುಸ್ತಕಗಳ ಪಟ್ಟಿಯೊಂದಿಗೆ ಆದೇಶ ಪ್ರತಿ ವಿತರಿಸಿ, ಪುಸ್ತಕ ಪರಿಶೀಲನೆ ಬಳಿಕ ಸ್ವೀಕೃತಿ ಪತ್ರವನ್ನು ಇಷ್ಟು ವರ್ಷ ಒದಗಿಸುತ್ತಿತ್ತು. 2020ರ ಮೊದಲ ಹಂತದ ಖರೀದಿಯಲ್ಲಿಯೂ ಇದೇ ಪ್ರಕ್ರಿಯೆಯನ್ನು ಅನುಸರಿಸಿತ್ತು. ಆದರೆ, ಈ ಹಿಂದೆ ಸರಬರಾಜದ ಕೆಲವು ಪುಸ್ತಕಗಳು ಮಾನದಂಡದ ಅನುಸಾರ ನಿಗದಿತ ಗುಣಮಟ್ಟ ಇರಲಿಲ್ಲ ಎಂಬ ಕಾರಣಕ್ಕೆ ಪ್ರಕಾಶಕರನ್ನೇ ಹೊಣೆಯಾಗಿಸಿ, ಸ್ಟ್ಯಾಂಪ್ ಪೇಪರ್ನಲ್ಲಿ ಮುಚ್ಚಳಿಕೆ ಬರೆಸಿಕೊಳ್ಳಲಾಗುತ್ತಿದೆ. ಇದರಿಂದ ಬಾಕಿ ಹಣ ಪಾವತಿ ಇನ್ನಷ್ಟು ವಿಳಂಬವಾಗಿದೆ.

ಈ ಯೋಜನೆಯಡಿ ಸಾಹಿತಿ ದೊಡ್ಡರಂಗೇಗೌಡ ಅವರ ಅಧ್ಯಕ್ಷತೆಯ ಈ ಹಿಂದಿನ ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿ 2022ರಲ್ಲಿಯೇ 2020ರ ಪುಸ್ತಕಗಳ ಪಟ್ಟಿಯನ್ನು ಸಿದ್ಧಪಡಿಸಿತ್ತು. ಆದರೆ, ಅದಕ್ಕೆ ಸರ್ಕಾರದ ಅನುಮೋದನೆ ದೊರೆತಿರಲಿಲ್ಲ. ಬಳಿಕ ಬಂದ ಕಾಂಗ್ರೆಸ್ ಸರ್ಕಾರ ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಯನ್ನು ಪುನರ್ ರಚಿಸಿತ್ತು. ಸಾಹಿತಿ ಕರೀಗೌಡ ಬೀಚನಹಳ್ಳಿ ಅವರ ಅಧ್ಯಕ್ಷತೆಯ ನೂತನ ಸಮಿತಿಯು ಇಲಾಖೆಯ ಸೂಚನೆ ಮೇರೆಗೆ ಅಂತಿಮಗೊಂಡಿದ್ದ ಪುಸ್ತಕಗಳ ಪಟ್ಟಿಯನ್ನು ಮರುಪರಿಶೀಲನೆ ನಡೆಸಿತ್ತು. ಈ ಪಟ್ಟಿಗೆ 2023ರ ನವೆಂಬರ್ನಲ್ಲಿ ಸರ್ಕಾರ ಅನುಮೋದನೆ ನೀಡಿತ್ತು. ಆದರೆ, ಅಗತ್ಯ ಅನುದಾನ ನೀಡದಿದ್ದರಿಂದ ಖರೀದಿ ನಡೆದಿರಲಿಲ್ಲ.

ಸರಬರಾಜಾದ ಪುಸ್ತಕಗಳ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಪ್ರಮಾಣಪತ್ರ ಸಲ್ಲಿಸಬೇಕೆಂಬುದು ಸರ್ಕಾರಿ ಆದೇಶದಲ್ಲಿಯೇ ಇದೆ. ಅದನ್ನು ಈಗ ಅನುಷ್ಠಾನ ಮಾಡಲಾಗಿದೆ
ಎಂ. ಕನಗವಲ್ಲಿ, ಸಾರ್ವಜನಿಕ ಗ್ರಂಥಾಲಯ ಇಲಾಖೆ ಆಯುಕ್ತೆ ರಾಜ್ಯ ಕೇಂದ್ರ ಗ್ರಂಥಾಲಯ

‘ಈಗಾಗಲೇ ಹಣ ಪಾವತಿ ವಿಳಂಬವಾಗಿದ್ದು, ಪ್ರಕಾಶಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅನಗತ್ಯವಾಗಿ ಈಗ ‘ಅಫಿಡವಿಟ್’ ಸಲ್ಲಿಸಲು ಸೂಚಿಸುವ ಮೂಲಕ ಇನ್ನಷ್ಟು ವಿಳಂಬ ಮಾಡಲಾಗುತ್ತಿದೆ’ ಎಂದು ಪ್ರಕಾಶಕರು ಅಸಮಾಧಾನ ವ್ಯಕ್ತಪಡಿಸಿದರು.

ಪುಸ್ತಕ ಆಯ್ಕೆ, ಖರೀದಿಗೆ ಹಿನ್ನಡೆ

ರಾಜ್ಯದಲ್ಲಿ ಸುಮಾರು 500 ಪ್ರಕಾಶನ ಸಂಸ್ಥೆಗಳಿವೆ. ಕೆಲವು ಲೇಖಕರು ಕೂಡ ಪ್ರಕಾಶನ ಕಾರ್ಯದಲ್ಲಿ ನಿರತರಾಗಿದ್ದಾರೆ. ಪ್ರತಿ ವರ್ಷ ಸುಮಾರು 8 ಸಾವಿರ ಪುಸ್ತಕಗಳು ಪ್ರಕಟವಾಗುತ್ತಿವೆ. ಬಹುತೇಕ ಪ್ರಕಾಶಕರು ಗ್ರಂಥಾಲಯ ಇಲಾಖೆಯ ಸಗಟು ಖರೀದಿಯನ್ನೇ ಅವಲಂಬಿಸಿದ್ದಾರೆ. ಆದರೆ, ನಿರ್ದಿಷ್ಟ ಬಜೆಟ್ ಘೋಷಿಸದಿರುವುದು, ಪುಸ್ತಕಗಳ ಖರೀದಿಗೆ ಅಗತ್ಯವಿರುವ ಅನುದಾನಕ್ಕೆ ಅನುಮೋದನೆ ದೊರೆಯದಿರುವುದು ಸೇರಿ ವಿವಿಧ ಕಾರಣದಿಂದ ಪುಸ್ತಕೋದ್ಯಮ ಹಿನ್ನಡೆ ಅನುಭವಿಸಿದೆ. 2020ರ ಖರೀದಿ ವಿಳಂಬವಾದ್ದರಿಂದ ಮುಂದಿನ ವರ್ಷಗಳ ಆಯ್ಕೆ ಮತ್ತು ಖರೀದಿಯೂ ಸಮಸ್ಯೆಯಾಗಿದೆ. 2021ರ ಪುಸ್ತಕಗಳ ಪಟ್ಟಿ ಕಳೆದ ತಿಂಗಳು ಪ್ರಕಟವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.