ಬೆಂಗಳೂರು: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ನಡೆಸುವ ರಾಜ್ಯದ ವಿವಿಧ ವಸತಿ ಶಾಲೆಗಳಲ್ಲಿ 6ನೇ ತರಗತಿಗೆ ನೇರ ಪ್ರವೇಶ ಪಡೆಯಲು ವಿಶೇಷ ವರ್ಗಗಳ ಕುಟುಂಬದ ಮಕ್ಕಳಿಗೆ ಜುಲೈ 25ರವರೆಗೆ ಅವಕಾಶ ನೀಡಲಾಗಿದೆ.

ಸಫಾಯಿ ಕರ್ಮಚಾರಿ, ಚಿಂದಿ ಆಯುವವರು, ಸ್ಮಶಾನ ಕಾರ್ಮಿಕರು, ಜೀತಮುಕ್ತ ಕಾರ್ಮಿಕರು, ಎಚ್ಐವಿಗೆ ಒಳಗಾದವರು, ಮಾಜಿ ದೇವದಾಸಿಯರು, ಅಲೆಮಾರಿ, ಅರೆ ಅಲೆಮಾರಿ, ಸೈನಿಕರು, ಮಾಜಿ ಸೈನಿಕರು ಸೇರಿದಂತೆ ವಿಶೇಷ ವರ್ಗದ ಕುಟುಂಬಗಳ 5ನೇ ತರಗತಿ ಉತ್ತೀರ್ಣರಾದ ಮಕ್ಕಳಿಗೆ ವಸತಿ ಶಾಲೆಗಳಲ್ಲಿ 6ನೇ ತರಗತಿ ಪ್ರವೇಶಕ್ಕೆ ಶೇ 50ರಷ್ಟು ಸೀಟು ಮೀಸಲಿಡಲಾಗಿತ್ತು.

ಮೀಸಲಿಟ್ಟ ಸೀಟುಗಳಲ್ಲಿ 9,357 ಭರ್ತಿಯಾಗಿದ್ದು, 11,198 ಸೀಟುಗಳು ಖಾಲಿ ಉಳಿದಿವೆ. ಹಾಗಾಗಿ, ಪ್ರವೇಶದ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ಸಂಘದ ಕಾರ್ಯನಿರ್ವಾಹಕ ನಿರ್ದೇಶಕರು ಹೇಳಿದ್ದಾರೆ.

ಪರಿಷತ್ನಲ್ಲೂ ಪ್ರಸ್ತಾಪ: ವಸತಿ ಶಾಲೆಗಳಲ್ಲಿ ಖಾಲಿ ಉಳಿದ ಸೀಟುಗಳನ್ನು ಇತರೆ ಎಲ್ಲ ವರ್ಗದ ಮಕ್ಕಳಿಗೂ ನೀಡುವ ಮೂಲಕ ಭರ್ತಿ ಮಾಡಬೇಕು ಎಂದು ವಿಧಾನ ಪರಿಷತ್ನಲ್ಲೂ ಹಲವು ಸದಸ್ಯರು ಒತ್ತಾಯಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.