ಮಂಗಳೂರು: ಹಿರಿಯ ಸಾಹಿತಿ ಬೊಳುವಾರು ಮಹಮ್ಮದ್ ಕುಂಞಿ ಸೇರಿದಂತೆ ಏಳು ಜನ ಗಣ್ಯರಿಗೆ 2020ನೇ ಸಾಲಿನ ‘ಸಂದೇಶ ಪ್ರಶಸ್ತಿ’ಗಳನ್ನು ಸಂದೇಶ ಪ್ರತಿಷ್ಠಾನವು ಪ್ರಕಟಿಸಿದೆ.

ಪ್ರತಿಷ್ಠಾನದ ಸಭಾಂಗಣದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ಸಾಹಿತಿ, ಆಯ್ಕೆ ಸಮಿತಿ ಅಧ್ಯಕ್ಷ ನಾ. ಡಿಸೋಜ, ಬೊಳುವಾರು ಮಹಮ್ಮದ್ ಕುಂಞಿ ಅವರಿಗೆ ‘ಸಂದೇಶ ಕನ್ನಡ ಸಾಹಿತ್ಯ ಪ್ರಶಸ್ತಿ’, ವಲ್ಲಿ ವಗ್ಗ (ವಲೇರಿಯನ್ ಡಿಸೋಜ) ಅವರಿಗೆ ‘ಸಂದೇಶ ಕೊಂಕಣಿ ಸಾಹಿತ್ಯ ಪ್ರಶಸ್ತಿ’, ‘ಅಪರಂಜಿ’ ಮಾಸಪತ್ರಿಕೆಯ ಸಂಪಾದಕ ಶಿವಕುಮಾರ್ ಅವರಿಗೆ ‘ಸಂದೇಶ ಮಾಧ್ಯಮ ಪ‍್ರಶಸ್ತಿ’, ಗಾಯಕಿ ಹೆಲೆನ್ ಡಿ ಕ್ರೂಜ್ ಅವರಿಗೆ ‘ಸಂದೇಶ ಕೊಂಕಣಿ ಸಂಗೀತ ಪ್ರಶಸ್ತಿ’, ಮನೋವೈದ್ಯೆ, ನೃತ್ಯ ಸಂಯೋಜಕಿ ಡಾ.ಕೆ.ಎಸ್.ಪವಿತ್ರ ಅವರಿಗೆ ‘ಸಂದೇಶ ಕಲಾ ಪ್ರಶಸ್ತಿ’, ದಾವಣಗೆರೆಯ ಸಿದ್ಧಗಂಗಾ ಶಿಕ್ಷಣ ಸಂಸ್ಥೆ ಮುಖ್ಯಸ್ಥೆ ಜಸ್ಟಿನ್ ಡಿಸೋಜ ಅವರಿಗೆ ‘ಸಂದೇಶ ಶಿಕ್ಷಣ ಪ್ರಶಸ್ತಿ’, ದೇಹದಾರ್ಢ್ಯ ಪಟು ವಿನ್ಸೆಂಟ್ ಪ್ರಕಾಶ್ ಕಾರ್ಲೊ ಅವರಿಗೆ ‘ಸಂದೇಶ ವಿಶೇಷ ಪ್ರಶಸ್ತಿ’ ಪ್ರದಾನ ಮಾಡಲಾಗುವುದು ಎಂದರು.

ಮಂಗಳೂರು ನಗರದ ನಂತೂರಿನಲ್ಲಿರುವ ಪ್ರತಿಷ್ಠಾನದ ಸಭಾಂಗಣದಲ್ಲಿ ಫೆಬ್ರುವರಿ 9ರಂದು ಪ್ರಶಸ್ತಿ ಪ್ರದಾನ ಮಾಡಲಾಗು
ವುದು. ಪ್ರಶಸ್ತಿಯು ತಲಾ ₹ 25 ಸಾವಿರನಗದು, ಫಲಕ, ಸನ್ಮಾನ ಪತ್ರಗಳನ್ನು ಒಳಗೊಂಡಿದೆ ಎಂದು ಮಾಹಿತಿ ನೀಡಿದರು. ಆಯ್ಕೆ ಸಮಿತಿಯಲ್ಲಿ ಡಾ.ಬಿ.ಎಸ್. ತಲ್ವಾಡಿ, ಡಾ.ನಾ.ದಾಮೋದರ ಶೆಟ್ಟಿ, ಕನ್ಸೆಪ್ಟ್ ಆಳ್ವ, ಚಂದ್ರಕಲಾ ನಂದಾವರ ಮತ್ತು ಸಾರಾ ಅಬೂಬಕ್ಕರ್ ಇದ್ದರು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.