ಬೆಂಗಳೂರು: ಮಳೆ, ಪ್ರವಾಹದಿಂದ ತತ್ತರಿಸಿರುವ ಪ್ರದೇಶಗಳ ಸಂತ್ರಸ್ತರಿಗೆ ಸೌರಶಕ್ತಿ ಬೆಳಕು, ಮೊಬೈಲ್ ಚಾರ್ಜ್ ಸೌಲಭ್ಯವನ್ನು ಉಚಿತವಾಗಿ ನೀಡಲು ಡಾ. ಹರೀಶ್ ಹಂದೆ ಅವರ ಸೆಲ್ಕೋ ಸೋಲಾರ್ ಸಂಸ್ಥೆ ಮುಂದಾಗಿದೆ.

ಜಿಲ್ಲಾಡಳಿತಗಳಿಂದ ಮನವಿ ಬಂದ ತಕ್ಷಣ ಈ ಸೌಲಭ್ಯ ಒದಗಿಸಲು ಸೆಲ್ಕೋ ಸನ್ನದ್ಧವಾಗಿದೆ ಎಂದು ಸಂಸ್ಥೆಯ ಸಿಇಒ ಮೋಹನ ಭಾಸ್ಕರ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ತಕ್ಷಣಕ್ಕೆ ಸೋಲಾರ್ ಲೈಟ್ ಹಾಗೂ ಮೊಬೈಲ್ ಚಾರ್ಜ್ ಮಾಡುವ ಸೌಲಭ್ಯವುಳ್ಳ 250 ಯೂನಿಟ್‍ಗಳನ್ನು ಸನ್ನದ್ಧ ಸ್ಥಿತಿಯಲ್ಲಿಟ್ಟಿದ್ದು, ಹೆಚ್ಚಿನ ಬೇಡಿಕೆ ಬಂದಲ್ಲಿ ಇನ್ನಷ್ಟು ಯೂನಿಟ್ ಒದಗಿಸಲಾಗುವುದು. ರಾಜ್ಯದ 48 ಸೆಲ್ಕೋ ಶಾಖೆಗಳು ತಲಾ ಎರಡು ಪರಿಹಾರ ಕೇಂದ್ರಗಳಲ್ಲಿ ಈ ಸೌಲಭ್ಯ ಒದಗಿಸಲಿವೆ’ ಎಂದು ಅವರು ವಿವರಿಸಿದ್ದಾರೆ.

‘ಒಂದು ಯೂನಿಟ್‍ನಲ್ಲಿ 24 ಗಂಟೆಯೂ ಕಾರ್ಯನಿರ್ವಹಿಸಬಲ್ಲ ಟ್ಯೂಬ್‍ಲೈಟ್, ಏಕಕಾಲಕ್ಕೆ 10 ಮೊಬೈಲ್‍ಗಳನ್ನು ಚಾರ್ಜ್ ಮಾಡಬಹುದಾಗಿರುತ್ತದೆ. ಅಗತ್ಯವಿರುವ ಪರಿಹಾರ ಕೇಂದ್ರಗಳಲ್ಲಿ ಸೆಲ್ಕೋ ಸಂಸ್ಥೆಯ ಒಬ್ಬ ಸಿಬ್ಬಂದಿ 24 ಗಂಟೆಯೂ ಈ ಸೌಲಭ್ಯ ಒದಗಿಸಲಿದ್ದಾರೆ. ಸೋಲಾರ್ ಬೆಳಕಿನ ವ್ಯವಸ್ಥೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸೆಲ್ಕೋ ಇಂಡಿಯಾದ ಹಿರಿಯ ಅಧಿಕಾರಿ ಪಾರ್ಥಸಾರಥಿ (9880100668) ಹಾಗೂ ಮಹೇಶ್ (9731036038) ಅವರನ್ನು ಸಂಪರ್ಕಿಸಬಹುದು’ ಎಂದು ಅವರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.