ದಾವಣಗೆರೆ: ‘ಲಿಂಗಾಯತ ವೀರಶೈವ ಧರ್ಮ ಒಡೆಯಬಾರದು ಎಂದುಡಿ.ಕೆ. ಶಿವಕುಮಾರ್ ಹೇಳಿರುವುದು ಸರಿಯಾಗಿದೆ. ಈ ವಿಚಾರಕ್ಕೆ ಸಂಬಂಧಿಸಿಮಾಜಿ ಸಚಿವ ಎಂ.ಬಿ.ಪಾಟೀಲ್, ವಿನಯ ಕುಲಕರ್ಣಿ ಸುಮ್ಮನಿರಬೇಕು. ಇಲ್ಲದಿದ್ದರೆ ನಾವೇ ಹೈಕಮಾಂಡ್ಗೆ ದೂರು ನೀಡುತ್ತೇವೆ’ ಎಂದು ಅಖಿಲ ಭಾರತ ಲಿಂಗಾಯತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಎಚ್ಚರಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎಂ.ಬಿ. ಪಾಟೀಲ್ ಬಳಿ ಹಣ ಇದೆ ಎಂದು ಅಹಂನಿಂದ ವರ್ತಿಸುವುದು ಸರಿಯಲ್ಲ. ಸಮಾಜ ಒಡೆಯುವ ಕೆಲಸ ಎಂ.ಬಿ.ಪಾಟೀಲ್ ಹಾಗೂ ವಿನಯ ಕುಲಕರ್ಣಿ ಮಾಡಬಾರದು’ ಎಂದು ಹೇಳಿದರು.

ವೀರಶೈವ ಮತ್ತು ಲಿಂಗಾಯತ ಎರಡು ಒಂದೇ. ಲಿಂಗಾಯತ ಧರ್ಮ ವಿಚಾರವನ್ನುಮಾಜಿ ಸಿಎಂ ಸಿದ್ದರಾಮಯ್ಯ ಅವರು ಎಂ.ಬಿ.ಪಾಟೀಲ್ ಹಾಗೂ ವಿನಯ ಕುಲಕರ್ಣಿ ಮಾತು ಕೇಳಿ ಕೇಂದ್ರಕ್ಕೆ ಶಿಪಾರಸ್ಸು ಮಾಡಿದ್ದರು.

ಈ ವಿಚಾರದ ಬಗ್ಗೆ ಸಚಿವ ಡಿ. ಕೆ. ಶಿವಕುಮಾರ್ ಸರಿಯಾಗಿ ಹೇಳಿದ್ದಾರೆ. ಅವರ ವಿರುದ್ದ ಎಂ.ಬಿ. ಪಾಟೀಲ್ ಹಾಗೂ ಕುಲಕರ್ಣಿ ಹೇಳಿಕೆ ನೀಡುತ್ತಿದ್ದಾರೆ.

ಇವರೇನು ಕಾಂಗ್ರೆಸ್ ಹೈಕಮಾಂಡ್ ಅಲ್ಲ. ಇಬ್ಬರು ಸಮಾಜ ಒಡೆಯುವಕೆಲಸ ಬಿಡಬೇಕು ಎಂದು ಕಿಡಿಕಾರಿದರು.

ವೀರಶೈವ ಲಿಂಗಾಯತ ಒಳಪಂಗಡಗಳ ನಡುವೆ ಲಗ್ನ ನಡೆಯಬೇಕು. ಇದು ಸಮಾಜದ ಸ್ವಾಮೀಜಿಗಳ ಸಲಹೆಯೂ ಹೌದು. ಇಂಥದ್ದನ್ನು ಮಾಡಬೇಕು. ಬಸವಣ್ಣ ಹೇಳಿದ ದಾರಿಯಲ್ಲಿ ನಡೆಯಬೇಕು ಎಂದು ಸಲಹೆ ನೀಡಿದರು.

ಇದನ್ನೂ ಓದಿ...

ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರದಲ್ಲಿ 'ಕೈ' ಹಾಕಬಾರದಿತ್ತು: ಡಿ.ಕೆ. ಶಿವಕುಮಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.