ಬೆಂಗಳೂರು: ‘ಕರ್ನಾಟಕ ಸಂಭ್ರಮ–50’ ಅಭಿಯಾನದ ಸುವರ್ಣ ಮಹೋತ್ಸವದ ನೆನಪಿಗಾಗಿ ವಿವಿಧ ಕ್ಷೇತ್ರಗಳ ತಲಾ 50 ಮಹಿಳೆಯರು ಮತ್ತು ಪುರುಷ ಸಾಧಕರಿಗೆ ನೀಡುತ್ತಿರುವ ‘ಸುವರ್ಣ ಮಹೋತ್ಸವ’ ಪ್ರಶಸ್ತಿಯ ಮೊತ್ತವನ್ನು ₹50 ಸಾವಿರದಿಂದ ₹1 ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬುಧವಾರ 100 ಸಾಧಕರ ಪಟ್ಟಿ ಬಿಡುಗಡೆ ಮಾಡಿತ್ತು. ಪ್ರಶಸ್ತಿಯ ನಗದು ಪುರಸ್ಕಾರವನ್ನು ₹50 ಸಾವಿರ ಎಂದು ಘೋಷಿಸಿತ್ತು. ಒಂದು ದಿನದ ಬಳಿಕ ಮೊತ್ತವನ್ನು ₹1 ಲಕ್ಷಕ್ಕೆ ಹೆಚ್ಚಳ ಮಾಡಿದೆ.

‘ಕರ್ನಾಟಕ ಸಂಭ್ರಮ–50’ ಅಭಿಯಾನದ ಐತಿಹಾಸಿಕ ಆಚರಣೆಗಾಗಿ ನೀಡುತ್ತಿರುವ ಪ್ರಶಸ್ತಿಯ ಮೊತ್ತವನ್ನು ಹೆಚ್ಚಳ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಚಿಸಿದ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪ್ರಶಸ್ತಿಗೆ ಆಯ್ಕೆಯಾದ ಎಲ್ಲ 100 ಸಾಧಕರಿಗೂ ಈ ಮೊತ್ತ ದೊರಕಲಿದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.