ಬೆಂಗಳೂರು: ‘ಸಿದ್ದು ನಿಜಕನಸು’ ಪುಸ್ತಕ ವೈಯಕ್ತಿಕ ತೇಜೋವಧೆಯ ಪುಸ್ತಕವಲ್ಲ. ರಾಜಕೀಯವಾಗಿ ಅವರ ದ್ವಂದ್ವಗಳನ್ನು ಪ್ರಶ್ನಿಸುವ ಪುಸ್ತಕವಾಗಿತ್ತು. ಆ ಪುಸ್ತಕವನ್ನು ಓದದೇ ಸಿದ್ದರಾಮಯ್ಯ ಹೆದರಿಕೊಂಡು ಓಡಿ ಹೋಗಿ ನ್ಯಾಯಾಲಯದಿಂದ ತಡೆಯಾಜ್ಞೆ ತಂದರು’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.

‘ಪುಸ್ತಕದಲ್ಲಿ ಆಕ್ಷೇಪಾರ್ಹ ವಿಷಯ ಇದಿದ್ದರೆ ಮಾನನಷ್ಟ ಹೂಡಬಹುದಿತ್ತು. ಆದರೆ, ಅವರಿಗೆ ಸತ್ಯವನ್ನು ಎದುರಿಸುವ ಧೈರ್ಯವೇ ಇಲ್ಲ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇನ್ನು ಮುಂದೆಯಾದರೂ ಬೇರೆಯವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವಾಗ ಸಿದ್ದರಾಮಯ್ಯ ಯೋಚಿಸಬೇಕು ಎಂದರು.

‘65 ವರ್ಷ ಆದಾಗ ಇದೇ ನನ್ನ ಕೊನೆ ಚುನಾವಣೆ, ಮುಂದೆ ಸ್ಪರ್ಧಿಸುವುದಿಲ್ಲ ಎಂದಿದ್ದರು. ಈಗ 75 ವರ್ಷ ಆದರೂ ರಾಜಕೀಯದಿಂದ ನಿವೃತ್ತಿ ಆಗುತ್ತಿಲ್ಲ. ರಾಜಕೀಯದಲ್ಲೇ ಉಳಿಯುತ್ತೇನೆ ಎನ್ನುವ ಮೂಲಕ ‘ಸ್ಟೇ ರಾಮಯ್ಯ’ ಆಗಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.