ಮೈಸೂರು: ‘ಕುಟುಂಬ ರಾಜಕಾರಣ ಯಾರು ಮಾಡುತ್ತಾರೆ ಎಂಬುದು ಇಡೀ ರಾಜ್ಯ ಹಾಗೂ ದೇಶಕ್ಕೆ ಗೊತ್ತು. ಅದನ್ನು ನಾನು ಹೇಳುವ ಅಗತ್ಯ ಇಲ್ಲ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಎಚ್.ಡಿ.ಕುಮಾರಸ್ವಾಮಿಗೆ ತಿರುಗೇಟು ನೀಡಿದರು.

ಮೈಸೂರಿನ ತಮ್ಮ ನಿವಾಸದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ವಿರುದ್ಧ ಮಾಡಿರುವ ಸರಣಿ ಟ್ವೀಟ್ಗೆ ಪ್ರತ್ಯುತ್ತರ ಕೊಟ್ಟರು.

‘ಸಿದ್ಧಸೂತ್ರ ಕಾಂಗ್ರೆಸ್ ಫ್ಯಾಮಿಲಿ’ ಎಂದು ಎಚ್ಡಿಕೆ ಹೇಳಿದ್ದಕ್ಕೆ, ‘ವೈಯಕ್ತಿಕವಾಗಿ ನಾನು ಯಾರ ಮೇಲೂ ಟೀಕೆ ಮಾಡಲ್ಲ. ಎಚ್.ಡಿ.ದೇವೇಗೌಡ, ಕುಮಾರಸ್ವಾಮಿ ಹಾಗೂ ಅವರ ಕುಟುಂಬದ ಸದಸ್ಯರ ಮೇಲೆ ದ್ವೇಷವಿಲ್ಲ. ತತ್ವ ಸಿದ್ದಾಂತದಲ್ಲಿ ಮಾತ್ರ ಭಿನ್ನಾಭಿಪ್ರಾಯವಿದೆ’ ಎಂದರು.

‘ಜೆಡಿಎಸ್ನವರು ಜಾತ್ಯಾತೀತ ಎಂದು ಹೇಳುತ್ತಾರೆ. ಆದರೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಾರೆ. ಕುಟುಂಬ ರಾಜಕಾರಣ ಮಾಡುತ್ತಾರೆ. ಆ ಬಗ್ಗೆ ನಾನು ಮಾತನಾಡಿದರೆ, ಅವರ ಮೇಲೆ ದ್ವೇಷ ಸಾಧಿಸುತ್ತಿದ್ದೇನೆ ಎನ್ನುತ್ತಾರೆ’ ಎಂದು ಹೇಳಿದರು.

ಶ್ರೀನಿವಾಸ ಪ್ರಸಾದ್ಗೆ ನೈತಿಕತೆ ಇಲ್ಲ

‘ಕೋಮುವಾದಿ ಪಕ್ಷ ಸೇರಿರುವ ಸಂಸದ ಶ್ರೀನಿವಾಸಪ್ರಸಾದ್ಗೆ ನನ್ನ ವಿರುದ್ಧ ಹೇಳಿಕೆ ನೀಡುವ ನೈತಿಕತೆ ಇಲ್ಲ. ಅವರು ಕಾಂಗ್ರೆಸ್, ಜೆಡಿಎಸ್, ಸಮಾಜವಾದಿ ಪಕ್ಷ, ಬಿಜೆಪಿ.. ಹೀಗೆ ಎಲ್ಲ ಪಕ್ಷ ಸುತ್ತಾಡಿದ್ದಾರೆ. ಅವರಿಗೆ ಅನಾರೋಗ್ಯ ಕಾಡಿದ್ದು, ಆದಷ್ಟು ಬೇಗ ಗುಣಮುಖರಾಗಲಿ’ ಎಂದರು.

ಮತದಾರರೇ ಇದನ್ನು ಅರ್ಥಮಾಡಿಕೊಳ್ಳಿ

‘ಬಿಜೆಪಿ, ಜೆಡಿಎಸ್ ಎರಡೂ ಪಕ್ಷಗಳು ಮೀಸಲಾತಿ ವಿರೋಧಿಗಳು. ಅವರು ಸ್ಥಳೀಯ ಸಂಸ್ಥೆಗಳಿಗೆ ಏನು ಕೊಡುಗೆ ನೀಡಿಲ್ಲ. ಡಿ.10ರ ಪರಿಷತ್ ಚುನಾವಣೆಯಲ್ಲಿ ಮತಹಾಕುವ ವೇಳೆ ಮತದಾರರು ಇದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಸಿದ್ದರಾಮಯ್ಯ ಸಲಹೆ ನೀಡಿದರು.‘ಬಿಜೆಪಿ ಮತ್ತು ಜೆಡಿಎಸ್ಗೆ ಸಾಮಾಜಿಕ ನ್ಯಾಯದಲ್ಲಿ ನಂಬಿಕೆಯಿಲ್ಲ. ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಹೊಂದಿದ್ದು, ಪರಿಷತ್ ಚುನಾವಣೆಯ ಟಿಕೆಟ್ ಹಂಚಿಕೆ ವೇಳೆ ಅದನ್ನು ಕಾರ್ಯ ರೂಪಕ್ಕೆ ತಂದಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.