ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆ–3 ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, 25,347 ವಿದ್ಯಾರ್ಥಿಗಳು (ಶೇ25.88) ಉತ್ತೀರ್ಣರಾಗಿದ್ದಾರೆ.

ಆ.2ರಿಂದ 9ರವರೆಗೆ 410 ಕೇಂದ್ರಗಳಲ್ಲಿ ನಡೆದಿದ್ದ ಪರೀಕ್ಷೆಯನ್ನು 97,952 ವಿದ್ಯಾರ್ಥಿಗಳು ಬರೆದಿದ್ದರು. ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಪರೀಕ್ಷೆಗೆ ಹಾಜರಾಗಿದ್ದ 30,223 ಬಾಲಕಿಯರಲ್ಲಿ 8,583 ಮಂದಿ (ಶೇ28.4) ಉತ್ತೀರ್ಣರಾಗಿದ್ದಾರೆ. ಶೇ 24.75ರಷ್ಟು ಬಾಲಕರು ತೇರ್ಗಡೆಯಾಗಿದ್ದಾರೆ.

ಖಾಸಗಿ ಶಾಲೆಗಳು ಶೇ 30.66, ಅನುದಾನಿತ ಶೇ 25.19 ಹಾಗೂ ಸರ್ಕಾರಿ ಶಾಲೆಗಳು ಶೇ 24.3ರಷ್ಟು ಫಲಿತಾಂಶ ಪಡೆದಿವೆ. ಮೂರನೇ ಪರೀಕ್ಷೆಯಲ್ಲೂ ಗ್ರಾಮೀಣ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ತೇರ್ಗಡೆಯಾಗಿದ್ದಾರೆ. ಪರೀಕ್ಷೆ ಬರೆದಿದ್ದ 38,056 ವಿದ್ಯಾರ್ಥಿಗಳಲ್ಲಿ 10,462 (ಶೇ 27.49) ಹಾಗೂ ನಗರ ಪ್ರದೇಶದ 59,896 ವಿದ್ಯಾರ್ಥಿಗಳಲ್ಲಿ 14,885 (ಶೇ 24.85) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಮರು ಮೌಲ್ಯಮಾಪನಕ್ಕೆ ಅರ್ಜಿ, ಸೆ. 4 ಕೊನೆಯ ದಿನ:

ಉತ್ತರ ಪತ್ರಿಕೆಗಳ ಛಾಯಾ ಪ್ರತಿ ಪಡೆಯಲು ಆ. 30 ಕೊನೆಯ ದಿನ. ನಿಗದಿತ ಶುಲ್ಕ ಪಾವತಿಸಿದವರು ಆ.26ರಿಂದ 31ರ ಒಳಗೆ ಡೌನ್‌ಲೋಡ್ ಮಾಡಿಕೊಳ್ಳಬಹುದು. ಮರು ಎಣಿಕೆ, ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಸೆ. 4 ಕೊನೆಯ ದಿನವಾಗಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.