ಹುಬ್ಬಳ್ಳಿ: ವೀರೇಂದ್ರ ಪಾಟೀಲ್ ಅವರಿಗೆ ಕಾಂಗ್ರೆಸ್ ಅವಮಾನ ಮಾಡಿದೆ. ಹಾಗಾಗಿ ವೀರಶೈವರ ಮತ ಕೇಳುವ ಹಕ್ಕುಕಾಂಗ್ರೆಸ್ಗೆ ಯಾವುದೇ ಕಾರಣಕ್ಕೂ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

‘ಎರಡು ಉಪಚುನಾವಣೆಯಲ್ಲಿ ಕಾಂಗ್ರೆಸ್ ಹಣದ ಹೊಳೆ ಹರಿಸುತ್ತಿದೆ. ಆದರೆ ಎರಡೂ ಕ್ಷೇತ್ರದಲ್ಲಿ ನಾವು 20 ಸಾವಿರಕ್ಕಿಂತ ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ರಾಜ್ಯದಲ್ಲಿ ಬದಲಾವಣೆ ತರಲು ಬಿಜೆಪಿ ಗೆಲ್ಲಿಸಬೇಕು. ಈ ಚುನಾವಣೆ ಗೆಲ್ಲುವ ಜೊತೆಗೆ ಮೂವರು ಪಕ್ಷೇತರರು ನಮ್ಮ ಜೊತೆ ಬರಲಿದ್ದಾರೆ. ಆಗ ನಮ್ಮ ಸಂಖ್ಯಾಬಲ 109 ಆಗುತ್ತದೆ ಹೀಗಾಗಿ ಬದಲಾವಣೆ ಆಗುತ್ತದೆ’ ಎಂದು ಹೇಳಿದರು.

ಸಿದ್ದರಾಮಯ್ಯಗೆ ಮೋದಿ ವಿರುದ್ಧ ಮಾತನಾಡಿದರೆ ದೊಡ್ಡವನಾಗುತ್ತೀನಿ ಎನ್ನುವ ಭಾವನೆ ಬಂದಿದೆ. ಆದರೆ, ಲೋಕಸಭೆಯಲ್ಲಿ ನಾವು 22 ಸ್ಥಾನ ಗೆಲ್ಲುತ್ತೇವೆ ಎಂದು ನಾವು ಹೇಳುತ್ತೇವೆ. ಕಾಂಗ್ರೆಸ್ನವರು ಹಾಗೆ ಹೇಳಲಿ ನೋಡೋಣಎಂದು ಸವಾಲು ಹಾಕಿದರು.

ಇವನ್ನೂ ಓದಿ...

* ‘ರೇವಣ್ಣ ಕೂಡ ಸಿಎಂ ಆಗಬಹುದು’: ಮುಖ್ಯಮಂತ್ರಿ ಕುಮಾರಸ್ವಾಮಿಗೆ ಸಿದ್ದು ಗುದ್ದು

*ಖರ್ಗೆ ಅವರನ್ನು ಸಿಎಂ ಮಾಡಿ: ಕುಮಾರಸ್ವಾಮಿಗೆ ಯಡಿಯೂರಪ್ಪ ಸವಾಲು

*ಕಾಂಗ್ರೆಸ್ ಗೆದ್ದರೆ ಮೋದಿ ನೇಣು ಹಾಕಿಕೊಳ್ಳುತ್ತಾನಾ?: ಖರ್ಗೆ ಪ್ರಶ್ನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.