ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದಲೇ ಕಣಕ್ಕೆ ಇಳಿಯಬೇಕು ಎಂದು ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಸುಮಲತಾ ಅಂಬರೀಷ್ ಅವರನ್ನು ಒತ್ತಾಯಿಸಿದರು.

ಜೆ.ಪಿ.ನಗರದ ನಿವಾಸದ ಎದುರು ಶುಕ್ರವಾರ ಜಮಾಯಿಸಿದ ನೂರಾರು ಕಾರ್ಯಕರ್ತರು ಈ ಒತ್ತಾಯ ಮಾಡಿದರು.

ಈ ವೇಳೆ ಪ್ರತಿಕ್ರಿಯಿಸಿದ ಸುಮಲತಾ, ‘ರಾಜಕೀಯಕ್ಕೆ ಬರುವ ಆಲೋಚನೆ ಎಂದಿಗೂ ಇರಲಿಲ್ಲ. ಹಾಗೊಂದು ವೇಳೆ ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದರೆ ಮಂಡ್ಯ ಕ್ಷೇತ್ರದಿಂದ ಮಾತ್ರ. ಅಭಿಮಾನಿಗಳೇ ನನ್ನ ಶಕ್ತಿ. ಪತಿ ಅಂಬರೀಷ್ ಅವರು ಕಾಂಗ್ರೆಸ್ನಲ್ಲಿ ಗುರುತಿಸಿಕೊಂಡಿದ್ದರು. ನನಗೂ ಕಾಂಗ್ರೆಸ್ ಪಕ್ಷವೇ ಪರಿಚಯ. ಕಾಂಗ್ರೆಸ್ನ ನಾಯಕರ ಜತೆಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇನೆ’ ಎಂದು ಹೇಳುವ ಮೂಲಕ ಸ್ಪರ್ಧೆಯ ಇಂಗಿತವನ್ನು ವ್ಯಕ್ತಪಡಿಸಿದರು.

ಇದನ್ನೂ ಓದಿ:ರಾಜಕೀಯ ಪ್ರವೇಶ ದ್ವೇಷ ಸಾಧನೆಗಲ್ಲ

‘ಮಂಡ್ಯ ಜನರ ಭಾವನೆಗೆ ಬೆಲೆ ಕೊಡಬೇಕಿದೆ. ಮಂಡ್ಯ ಜನರೊಂದಿಗೆ ಅಂಬರೀಷ್ ಅವರಿಗೆ ಇದ್ದ ಸಂಬಂಧವನ್ನು ಕಡಿದುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಮಂಡ್ಯ ಜನರ ಮಾತಿನ ಬಗ್ಗೆ ಯೋಚನೆ ಮಾಡುತ್ತೇನೆ. ರಾಜಕೀಯ ನನಗೆ ಹೊಸದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.