ಬೆಂಗಳೂರು: ಪ್ರಯಾಣಿಕರ ದಟ್ಟಣೆಯ ಮಾರ್ಗವಾಗಿರುವ ನೈರುತ್ಯ ರೈಲ್ವೆಯ ಹುಬ್ಬಳ್ಳಿ–ಬೆಂಗಳೂರು ಮಾರ್ಗದಲ್ಲಿ ಎರಡು ಹೊಸ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ಇದೇ ಮಾರ್ಚ್ 20 ರಿಂದ ಆರಂಭವಾಗಲಿದೆ ಎಂದು ಧಾರವಾಡ ಸಂಸದರೂ ಆಗಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಫೇಸ್‌ಬುಕ್ ಮೂಲಕ ತಿಳಿಸಿದ್ದಾರೆ.

‘ಪ್ರಯಾಣಿಕರ ಬೇಡಿಕೆ ಹಿನ್ನಲೆಯಲ್ಲಿ ಕಾಯ್ದಿರಿಸುವ ವಿಶೇಷ ಸೇವೆಯ ಈ ರೈಲುಗಳು ಇದೆ ಮಾರ್ಚ್ 20 ರಿಂದ ತಮ್ಮ ಸಂಚಾರ ಆರಂಭಿಸಲಿವೆ. ರಾತ್ರಿ 11:15ಕ್ಕೆ ಹುಬ್ಬಳ್ಳಿಯಿಂದ ( ರೈಲು ಸಂಖ್ಯೆ : 07339) ಹೊರಡುವ ರೈಲು ಬೆಳಗ್ಗೆ 6:50ಕ್ಕೆ ಬೆಂಗಳೂರು ತಲುಪಲಿದೆ ಹಾಗೂ ಬೆಂಗಳೂರಿನಿಂದ (ರೈಲು ಸಂ : 07340) ರಾತ್ರಿ 11:15ಕ್ಕೆ ಹೊರಡುವ ರೈಲು ಬೆಳಗ್ಗೆ 7:30ಕ್ಕೆ ಹುಬ್ಬಳ್ಳಿ ತಲುಪಲಿದೆ’ ಎಂದು ತಿಳಿಸಿದ್ದಾರೆ.

‘ಮತ್ತೊಂದು ರೈಲು ಬೆಳಗ್ಗೆ 7:45ಕ್ಕೆ ಬೆಂಗಳೂರಿನಿಂದ (ರೈಲು ಸಂಖ್ಯೆ : 07353) ಹೊರಟು ಮಧ್ಯಾಹ್ನ 2:30ಕ್ಕೆ ಹುಬ್ಬಳ್ಳಿ ತಲುಪಲಿದೆ ಹಾಗೂ ಹುಬ್ಬಳ್ಳಿಯಿಂದ (ರೈಲು ಸಂ : 07354) 3:15ಕ್ಕೆ ಹೊರಡುವ ರೈಲು ರಾತ್ರಿ 11:10ಕ್ಕೆ ಬೆಂಗಳೂರು ತಲುಪಲಿದೆ’ ಎಂದು ತಿಳಿಸಿದ್ದಾರೆ.

ಈ ಎರಡು ರೈಲುಗಳು ಹಾವೇರಿ, ದಾವಣಗೆರೆ, ಬೀರೂರು, ತುಮಕೂರು ಹಾಗೂ ಯಶವಂತಪುರ ಮಾರ್ಗವಾಗಿ ಸಂಚರಿಸಲಿವೆ ಎಂದು ಮಾಹಿತಿ ನೀಡಿದ್ದಾರೆ.

ನಮ್ಮ ಕೋರಿಕೆಗೆ ಸ್ಪಂದಿಸಿ ರೈಲು ಸಂಚಾರ ಆರಂಭಿಸಲು ಆದೇಶ ನೀಡಿದ ಕೇಂದ್ರ ರೈಲು ಸಚಿವರಾದ ಅಶ್ವಿನಿ ವೈಷ್ಣವ್ ಅವರಿಗೆ ಧನ್ಯವಾದಗಳು ಎಂದು ಸಚಿವರು ಹೇಳಿದ್ದಾರೆ.

ಚಾರ್ಟ್ ತೋರಿಸುತ್ತಿಲ್ಲ

ಸಚಿವರು ಹೇಳಿರುವ ಈ ಹೊಸ ರೈಲುಗಳ ಬಗ್ಗೆ ‘ಪ್ರಜಾವಾಣಿ ವೆಬ್’, ಐಆರ್‌ಟಿಸಿ ಬುಕಿಂಗ್ ಆ್ಯಪ್‌ನಲ್ಲಿ ಪರಿಶೀಲಿಸಿದಾಗ ಮಾರ್ಚ್ 20ರಂದು ಹುಬ್ಬಳ್ಳಿ ಮತ್ತು ಬೆಂಗಳೂರಿನಿಂದ ಹೊರಡುವ ರೈಲುಗಳ ಲಿಸ್ಟ್‌ನಲ್ಲಿ ಈ ಹೊಸ ರೈಲುಗಳು ಕಂಡು ಬಂದಿಲ್ಲ.

ಮಹಾರಾಷ್ಟ್ರದ ಹೆದ್ದಾರಿಗೆ ಬಂಬೂ ಬ್ಯಾರಿಯರ್! ಇದು ಜಗತ್ತಿನಲ್ಲಿಯೇ ಮೊದಲು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.