ನಾಪೋಕ್ಲು: ಪುಣ್ಯಕ್ಷೇತ್ರ ಭಾಗಮಂಡಲ ಹಾಗೂ ತಲಕಾವೇರಿಗಳಿಗೆ ಕೋವಿಡ್ 19 ರ ಬಿಸಿ ತಟ್ಟಿದೆ,ಕೊರೊನಾ ಭೀತಿಯಿಂದಾಗಿ ಪ್ರವಾಸಿಗೆ ಸಂಖ್ಯೆ ದಿಡೀರ್ ಇಳಿಮುಖಗೊಂಡಿದೆ.

ಭಾಗಮಂಡಲದಲ್ಲಿ ಶನಿವಾರ ಯಾತ್ರಾಥಿಗಳ ಸಂಖ್ಯೆ ಕಡಿಮೆ ಇತ್ತು.ತಲಕಾವೇರಿ ಕ್ಷೇತ್ರವೂ ಭಣಗುಡುತ್ತಿತ್ತು.

ಜಿಲ್ಲೆಯ ಕೆಲವು ಯಾತ್ರಾರ್ಥಿಗಳು ಭಾಗಮಂಡಲಕ್ಕೆ ಭೇಟಿ ನೀಡಿ ಪಿಂಡಪ್ರದಾನದಂತಹ ತುರ್ತು ಕಾರ್ಯಗಳನ್ನು ನೆರವೇರಿಸಿದರು. ವಾರಾಂತ್ಯದಲ್ಲಿ ಅಧಿಕ ಸಂಖ್ಯೆಯ ಯಾತ್ರಾರ್ಥಿಗಳು ಕಂಡುಬರುತ್ತಿದ್ದರು.

ಹೊರ ಜಿಲ್ಲೆಗಳಿಂದಲೂ ಅಧಿಕ ಸಂಖ್ಯೆಯ ವಾಹನಗಳು ಆಗಮಿಸುತ್ತಿದ್ದವು. ಶನಿವಾರ-ಭಾನುವಾರ 500ಕ್ಕೂ ಅಧಿಕ ವಾಹನಗಳು ತಲಕಾವೇರಿಯತ್ತ ತೆರಳುತ್ತಿದ್ದವು.ಇದೀಗ ಕೋವಿಡ್–19 ಭೀತಿಯಿಂದಾಗಿ ವಾಹನಗಳ ಸಂಖ್ಯೆ ಗಣನೀಯವಾಗಿ ಇಳಿಮುಖಗೊಂಡಿದೆ.

ಗ್ರಾಮಪಂಚಾಯಿತಿಗೆ ಪಾರ್ಕಿಂಗ್ ಶುಲ್ಕ ಲಭಿಸದೇ ಆದಾಯಕ್ಕೆ ಹೊಡೆತ ಬಿದ್ದಿದೆ. ಭಕ್ತರ ಕೊರತೆಯಿದ್ದರೂ ದೇವಾಲಯಗಳಲ್ಲಿ ಪೂಜಾಕಾರ್ಯಗಳು ಎಂದಿನಂತೆ ನೆರವೇರಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.