ಬೆಂಗಳೂರು: ‘ಯುವ ಸಮುದಾಯ ಸಿನಿಮಾವನ್ನು ಅರ್ಥೈಸಿಕೊಳ್ಳುವ ರೀತಿ ಬದಲಾಗಬೇಕು’ ಎಂದು ನಟ ಪ್ರಕಾಶ್ ಬೆಳವಾಡಿ ಅಭಿಪ್ರಾಯಪಟ್ಟರು.

‘ಮಂಥನ’ ಹಮ್ಮಿಕೊಂಡಿದ್ದಮೇಕಿಂಗ್ ಆಫ್ ‘ದಿ ಕಾಶ್ಮೀರ್ ಫೈಲ್ಸ್’ ವಿಮರ್ಶೆ ಮತ್ತು ಸಂವಾದ’ ಕಾರ್ಯಕ್ರಮದಲ್ಲಿ ಭಾನುವಾರ ಅವರು ಮಾತನಾಡಿದರು.

‘ಕಾಶ್ಮೀರದಲ್ಲಿ ನಡೆದ ಘಟನಾವಳಿಗಳ ಆಧಾರದಲ್ಲಿ ಸಿನಿಮಾ ರೂಪುಗೊಂಡಿದೆ. ಅಲ್ಲಿನವರಿಗೆ ಈಗಲೂ ನ್ಯಾಯ ಸಿಕ್ಕಿಲ್ಲ. ನಿರ್ದೇಶಕರು ಇದನ್ನು ಹೇಳುವ ಪ್ರಯತ್ನ ಮಾಡಿದ್ದಾರೆ’ ಎಂದರು.

‘ಮನುಷ್ಯತ್ವವಿರುವವರಿಗೆ ಸಿನಿಮಾದಲ್ಲಿನ ಪಾತ್ರಗಳ ಬಗೆಗೆ ಮರುಕ ಹುಟ್ಟಬೇಕು. ಮರುಕ ವ್ಯಕ್ತಪಡಿಸದವರ ಬಗ್ಗೆ ಅನುಮಾನ ಮೂಡುತ್ತದೆ. ಸಿನಿಮಾದ ಕುರಿತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೀಡಿರುವ ಹೇಳಿಕೆ ಬೇಸರ ತರಿಸಿದೆ. ಅವರು ಬಹಳ ಅಪಾಯಕಾರಿ ಮನುಷ್ಯ ಎಂಬುದು ಈಗ ಮನದಟ್ಟಾಗಿದೆ. ಸಮಚಿತ್ತದಿಂದ ಕೂಡಿದ ಸಿನಿಮಾವಿದು. ಅವರು ಎಚ್ಚರ ತಪ್ಪಿ ಹೇಳಿಕೆ ನೀಡಿಲ್ಲ. ಯಾವುದೋ ಲೆಕ್ಕಾಚಾರ ಇಟ್ಟುಕೊಂಡೇ ಮಾತನಾಡಿದ್ದಾರೆ’ ಎಂದು ತಿಳಿಸಿದರು.

ಲೇಖಕ ಜಿ.ಬಿ.ಹರೀಶ್, ‘ಇಸ್ಲಾಂ ಹೋರಾಟವು ಭಾರತ ಕಟ್ಟಿರುವ ವಿದ್ಯೆಯ ವಿರುದ್ಧದ ಹೋರಾಟ. ಶಾರದಾ ಎಂಬ ಪಾತ್ರದ ಮೇಲೆ ನಡೆಯುವ ಆಕ್ರಮಣ, ಅತ್ಯಾಚಾರದ ಮೂಲಕ ನಿರ್ದೇಶಕರು ಇದನ್ನು ಸೂಚ್ಯವಾಗಿ ತೋರಿಸಿದ್ದಾರೆ’ ಎಂದರು.

ಕನ್ನಡ ಅಭಿವೃದ್ಧೀ ಪ್ರಾಧಿಕಾರದ ಸದಸ್ಯ ರೋಹಿತ್ ಚಕ್ರತೀರ್ಥ, ‘ಸಿನಿಮಾದಲ್ಲಿ ತೋರಿಸಿರುವ ವಿಷಯಗಳನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸಿ ಬಾಲ್ಯದಲ್ಲೇ ಅದನ್ನು ನಾವೆಲ್ಲಾ ಓದುವಂತೆ ಮಾಡಬೇಕಿತ್ತು. ಕಾಶ್ಮೀರ ಪಂಡಿತರ ಇತಿಹಾಸ ಹೇಳುವುದರ ಜೊತೆಗೆ ಬುದ್ದಿಜೀವಿಗಳ ಬೂಟಾಟಿಕೆಯ ಬಗ್ಗೆಯೂ ಸಿನಿಮಾ ಬೆಳಕು ಚೆಲ್ಲುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.