ಬೆಂಗಳೂರು: ‘ಸಂವಿಧಾನ ಉಳಿಸುತ್ತೇವೆ ಎಂದು ಹೇಳುವ ಕಾಂಗ್ರೆಸ್, ಸಂವಿಧಾನಕ್ಕೆ ಅಪಚಾರ ಎಸಗುವಂತಹ ಕೆಲಸವನ್ನೇ ಮಾಡಿಕೊಂಡು ಬಂದಿದೆ’ ಎಂದು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘ್ವಾಲ್ ಆರೋಪಿಸಿದರು.

ಸಿಟಿಜನ್ಸ್ ಫಾರ್ ಸೋಷಿಯಲ್ ಜಸ್ಟೀಸ್ ಮತ್ತು ಅಯೋಧ್ಯಾ ಪಬ್ಲಿಕೇಷನ್ಸ್ ನಗರದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ವಿಕಾಸ್ ಕುಮಾರ್ ಪಿ. ಅವರ ‘ಸಂವಿಧಾನ ಬದಲಾಯಿಸಿದ್ದು ಯಾರು?’ ಪುಸ್ತಕವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಅಂಬೇಡ್ಕರ್ ಅವರು ಸಂವಿಧಾನ ಸಭೆಗೆ ಆಯ್ಕೆಯಾಗುವುದೇ ಕಾಂಗ್ರೆಸ್ಗೆ ಇಷ್ಟವಿರಲಿಲ್ಲ. ಹೋರಾಟದ ಮೂಲಕ ಅವರು ಆ ಸ್ಥಾನಕ್ಕೆ ಬಂದರು. ಸಂವಿಧಾನ ಕರಡು ರಚನೆಯಲ್ಲೂ ಅವರನ್ನು ಕಡೆಗಣಿಸಲಾಗಿತ್ತು. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನ ನೀಡಲು ಅಂಬೇಡ್ಕರ್ ಅವರ ವಿರೋಧವಿತ್ತು. ಆದರೆ ಅವರ ಅನುಪಸ್ಥಿತಿಯಲ್ಲಿ 370ನೇ ವಿಧಿಯನ್ನು ಪಾಸು ಮಾಡಿಕೊಂಡು, ಅವರಿಗೆ ದ್ರೋಹ ಮಾಡಲಾಯಿತು’ ಎಂದು ಆರೋಪಿಸಿದರು.

‘ಸಂವಿಧಾನ ಉಳಿಸುತ್ತೇವೆ ಎನ್ನುವ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗಲೆಲ್ಲಾ ಅದಕ್ಕೆ ತಿದ್ದುಪಡಿ ತಂದಿದೆ. ಸಂವಿಧಾನದ ಸ್ವರೂಪವನ್ನೇ ಬದಲಿಸುವ 76 ತಿದ್ದುಪಡಿಗಳನ್ನು ಅದು ಮಾಡಿದೆ’ ಎಂದು ಆರೋಪಿಸಿದರು.

ಪುಸ್ತಕ ಕುರಿತು ಮಾತನಾಡಿದ ಮಾಜಿ ಶಾಸಕ ಎನ್.ಮಹೇಶ್, ‘ಅಂಬೇಡ್ಕರ್ ಅವರು ಪರಿಶಿಷ್ಟರಿಗೆ ಪ್ರತ್ಯೇಕ ರಾಜಕೀಯ ಕ್ಷೇತ್ರಗಳನ್ನು ಕೇಳಿದಾಗ ವಿರೋಧಿಸಿದ ಗಾಂಧೀಜಿ, ದೇಶ ವಿಭಜನೆ ಸಂದರ್ಭದಲ್ಲಿ ಏನೂ ಮಾಡಲಿಲ್ಲ. ನನ್ನ ಹೆಣದ ಮೇಲೆ ದೇಶ ವಿಭಜನೆ ಆಗಬೇಕು ಎಂದು ಸವಾಲೊಡ್ಡಿದ್ದರೂ, ವಿಭಜನೆ ಆದಾಗ ಸುಮ್ಮನಿದ್ದರು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.