ಕಲಬುರ್ಗಿ: ‘ವ್ಯಾಸರಾಜರ ಮೂಲ ಬೃಂದಾವನವನ್ನು ಹಾಳು ಮಾಡಿರುವುದು ಮಾಧ್ವ ಸಮುದಾಯಕ್ಕೆ ಬಹುದೊಡ್ಡ ಆಘಾತ ಉಂಟು ಮಾಡಿದೆ.ಇದು ಹಿಂದೂ ಸಮಾಜಕ್ಕೆ ಅವಮಾನದ ಸಂಗತಿ’ ಎಂದು ಉತ್ತರಾದಿಮಠದ ಸತ್ಯಾತ್ಮ ತೀರ್ಥರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ:ನವಬೃಂದಾವನ ನಡುಗಡ್ಡೆಯಲ್ಲಿ ವ್ಯಾಸರಾಯರ ಬೃಂದಾವನ ಧ್ವಂಸ

ಕಲಬುರ್ಗಿಯಿಂದ ಆನೆಗೊಂದಿಗೆ ತೆರಳುವ ಮಾರ್ಗದಲ್ಲಿಮಾತನಾಡಿದ ಅವರ ಮಾತುಗಳ ಅಕ್ಷರ ರೂಪ ಇಲ್ಲಿದೆ...

‘ವ್ಯಾಸರಾಜರು ವಿಜಯನಗರ ಸಾಮ್ರಾಜ್ಯಕ್ಕೆ ರಾಜಗುರುಗಳಾಗಿದ್ದವರು. ತತ್ವಜ್ಞಾನದ ಕ್ಷೇತ್ರದಲ್ಲಿ ಅವರ ಕೊಡುಗೆ ಬಹಳ ದೊಡ್ಡದು. ನ್ಯಾಯಾಮೃತ, ತರ್ಕತಾಂಡವದಂಥ ಗ್ರಂಥಗಳನ್ನು ರಚಿಸಿ ಮಾಧ್ವ ವಾಜ್ಞಯವನ್ನು ಶ್ರೀಮಂತಗೊಳಿಸಿದ ಮಹಾನುಭಾವರು. ವ್ಯಾಸ ಸಾಹಿತ್ಯದ ಪ್ರವರ್ತಕರು.

‘ಕೃಷ್ಣದೇವರಾಯನಿಗೆರಾಜಗುರುಗಳು,ಪುರಂದರದಾಸರಿಗೆ ದೀಕ್ಷೆ ಕೊಟ್ಟವರು. ಅವರು ಮಾಡಿದ ಕಾರ್ಯಗಳು ನಿತ್ಯದಲ್ಲಿಯೂ ಸ್ಮರಣೀಯವಾದುದು. ಅವರಿಗೆ ಆಗಿರುವ ಈ ಅಪಚಾರ ಅಕ್ಷಮ್ಯ. ಈ ಬಗ್ಗೆ ಸರಿಯಾದ ತನಿಖೆ ನಡೆಯಬೇಕು. ದುಷ್ಕರ್ಮಿಗಳಿಗೆ ತಕ್ಕ ಶಿಕ್ಷ ವಿಧಿಸಬೇಕು. ಸರ್ಕಾರ ಇದರ ಬಗ್ಗೆವಿಶೇಷ ಕಾಳಜಿ ವಹಿಸಬೇಕು ಎಂಬುದು ನಮ್ಮೆಲ್ಲರ ಅಪೇಕ್ಷೆ.

‘ವ್ಯಾಸರಾಜಮಠದ ವಿದ್ಯಾಶ್ರೀಶ ತೀರ್ಥರ ಜೊತೆಗೆಮಾತನಾಡಿದ್ದೇನೆ. ಬೃಂದಾವನಪುನರ್ನಿರ್ಮಾಣ ಕಾರ್ಯವನ್ನು ಅವರು ಆರಂಭಿಸುತ್ತಾರೆ. ಅವರಿಗೆ ನಮ್ಮ ಕಡೆಯಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು.ವ್ಯಾಸರಾಜರ ಸೇವೆಗೆ ನಾವೆಲ್ಲರೂ ಸಿದ್ಧ. ವ್ಯಾಸರಾಜ ಮಠದವಿದ್ಯಾಶ್ರೀಶರಿಗೆ ನಮ್ಮೆಲ್ಲರ ಸಹಕಾರ ಇರಲಿ’.

ಇನ್ನಷ್ಟು...

ಬೃಂದಾವನ ಧ್ವಂಸ ಮಾಡಿದ ದುಷ್ಕರ್ಮಿಗಳ ಪತ್ತೆಗೆ ಮಂತ್ರಾಲಯ ಸ್ವಾಮೀಜಿ ಒತ್ತಾಯ

ತನಿಖೆಗೆ ಉತ್ತರಾದಿಮಠದ ಸತ್ಯಾತ್ಮತೀರ್ಥರ ಆಗ್ರಹ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.