ಬೆಂಗಳೂರು: ಪಶ್ಚಿಮಘಟ್ಟ ಸಂರಕ್ಷಣೆ ಮತ್ತು ಜೀವಜಲದ ಬಗ್ಗೆ ಅರಿವು ಮೂಡಿಸಲು ನೀರಿನ ಶುಲ್ಕದಲ್ಲಿ ತಿಂಗಳಿಗೆ ₹2 ಅಥವಾ ₹3 ಹಸಿರು ಸೆಸ್ ಹಾಕಿದರೆ ದಿನಕ್ಕೆ ಸರಾಸರಿ 10 ಪೈಸೆಯೂ ಹೊರೆಯಾಗದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ಸುದ್ದಿಗಾರರ ಜತೆ ಗುರುವಾರ ಮಾತನಾಡಿದ ಅವರು, ಸುಸ್ಥಿರ, ಶುದ್ಧ ಕುಡಿಯುವ ನೀರಿಗಾಗಿ ಪಶ್ಚಿಮಘಟ್ಟ ಸಂರಕ್ಷಣೆ ಅಗತ್ಯ. ಸೆಸ್ ಬಗ್ಗೆ ಸಾರ್ವಜನಿಕವಾಗಿ ಚರ್ಚೆಯಾದಾಗ ಪಶ್ಚಿಮಘಟ್ಟ ಮತ್ತು ನೀರಿನ ಹಿತಮಿತ ಬಳಕೆಯ ಜಾಗೃತಿ ಮೂಡುತ್ತದೆ. ಅದಕ್ಕಾಗಿಯೇ ಅಲ್ಪ ಪ್ರಮಾಣದ ಸೆಸ್ ವಿಧಿಸಲು ಚಿಂತನೆ ನಡೆದಿದೆ ಎಂದರು.

ಸೆಸ್ ಕುರಿತು ಜನಾಭಿಪ್ರಾಯ ಪಡೆಯಲಾಗುವುದು, ನಂತರ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಜತೆ ಚರ್ಚಿಸಿ, ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಜನರು ಆಕ್ಷೇಪ ವ್ಯಕ್ತಪಡಿಸಿದರೆ ಪ್ರಸ್ತಾವ ಕೈಬಿಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.