ಬೆಂಗಳೂರು: ಕಾಮನ್ವೆಲ್ತ್ ದೇಶಗಳ ವಿಜ್ಞಾನಿಗಳ ಸಮ್ಮೇಳನ ಬೆಂಗಳೂರಿನಲ್ಲಿ ಮಂಗಳವಾರ ಆರಂಭವಾಗಲಿದೆ. ಇದನ್ನು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಉದ್ಘಾಟಿಸಲಿದ್ದಾರೆ. 50 ವರ್ಷಗಳ ಅವಧಿಯಲ್ಲಿ ಕಾಮನ್ವೆಲ್ತ್ ದೇಶಗಳ ವಿಜ್ಞಾನಿಗಳ ಸಮ್ಮೇಳನ ನಡೆಯುತ್ತಿರುವುದು ಇದೇ ಮೊದಲು.

‘ಉದ್ಘಾಟನಾ ಕಾರ್ಯಕ್ರಮ ಭಾರತೀಯ ವಿಜ್ಞಾನ ಸಂಸ್ಥೆಯ ಜೆ.ಎನ್. ಟಾಟಾ ಸಭಾಂಗಣದಲ್ಲಿ ನಡೆಯಲಿದೆ. ಕಾಮನ್ವೆಲ್ತ್ ದೇಶಗಳ ಪೈಕಿ ಭಾರತದ ವೈಜ್ಞಾನಿಕ ಸಾಧನೆ ಸಾಕಷ್ಟು ಗಮನಾರ್ಹವಾಗಿದೆ. ಹಾಗಾಗಿ ಈ ಬಾರಿಯ ಸಮ್ಮೇಳನ ನಮ್ಮ ದೇಶದಲ್ಲಿ ನಡೆಯಲಿದೆ’ ಎಂದು ಜವಾಹರಲಾಲ್ ನೆಹರೂ ಉನ್ನತ ವಿಜ್ಞಾನ ಸಂಶೋಧನಾ ಕೇಂದ್ರದ (ಜೆಎನ್ಸಿಎಎಸ್ಆರ್) ಗೌರವಾಧ್ಯಕ್ಷ ಪ್ರೊ.ಸಿ.ಎನ್.ಆರ್.ರಾವ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವೈಜ್ಞಾನಿಕ ಕ್ಷೇತ್ರದಲ್ಲಿ ಭಾರತದ ಸಾಧನೆಗಳ ಕುರಿತು ವಿಶೇಷ ಉಪನ್ಯಾಸ ಇರಲಿದೆ. ಇನ್ಫೊಸಿಸ್ ಸಹ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ, ಬಯೋಕಾನ್ ಕಂಪೆನಿಯ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ, ಬಾಹ್ಯಾಕಾಶ ವಿಜ್ಞಾನಿ ಡಾ.ಕೆ. ಕಸ್ತೂರಿರಂಗನ್ ಉಪನ್ಯಾಸ ನೀಡಲಿದ್ದಾರೆ ಎಂದು ಪ್ರೊ. ರಾವ್ ಹೇಳಿದರು.

ಕಾಮನ್ವೆಲ್ತ್ ವ್ಯಾಪ್ತಿಯ, ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳ ವಿಜ್ಞಾನ ಕ್ಷೇತ್ರಕ್ಕೆ ಬಲ ತುಂಬುವುದೂ ಈ ಸಮ್ಮೇಳನದ ಉದ್ದೇಶಗಳಲ್ಲಿ ಒಂದು ಎಂದು ಲಂಡನ್ನ ರಾಯಲ್ ಸೊಸೈಟಿಯ ಫೆಲೊ ಪ್ರೊ. ಆ್ಯಂಟನಿ ಚೀತಂ ಹೇಳಿದರು.

ಸಮ್ಮೇಳನವನ್ನು ರಾಯಲ್ ಸೊಸೈಟಿ ಆಯೋಜಿಸುತ್ತಿದೆ. ಜೆಎನ್ಸಿಎಎಸ್ಆರ್, ಕೇಂದ್ರ ಸರ್ಕಾರ ಸಹಕಾರ ನೀಡುತ್ತಿವೆ. ಗುರುವಾರದ ವರೆಗಿನ ಸಮಾವೇಶ ಲಲಿತ್ ಅಶೋಕ್ ಹೋಟೆಲ್ನಲ್ಲಿ ನಡೆಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.