ಸಕಲೇಶಪುರ: ಪಶ್ಚಿಮಘಟ್ಟವನ್ನು ನಾಶ ಮಾಡುವ ಹಾಗೂ ಬಯಲುಸೀಮೆ ಜನರ ಬಾಯಾರಿಕೆ ಇಂಗಿಸುವಷ್ಟು ನೀರೂ ಲಭ್ಯವಿಲ್ಲದ ಕಾರಣ ‘ಎತ್ತಿನಹೊಳೆ ಯೋಜನೆ’ಯನ್ನು ಸರ್ಕಾರ ತಕ್ಷಣ ಕೈಬಿಡಬೇಕು ಎಂದು ರಂಗಕರ್ಮಿ ಪ್ರಸನ್ನ ಆಗ್ರಹಿಸಿದರು.

ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಮಲೆನಾಡು ಜನಪರ ಹೋರಾಟ ಸಮಿತಿ ಆಶ್ರಯದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ‘ಪರಿಸರ ಜ್ಞಾನ ಸಂವಹನ ಕಮ್ಮಟ’ವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

ಸಮುದ್ರದತ್ತ ಹರಿಯುವ ನೀರನ್ನು ಗುಡ್ಡದ ಮೇಲೆ ಹತ್ತಿಸುವುದು ಮೂರ್ಖ ಪ್ರಯತ್ನ. ಮೇಲಿರಬೇಕಾದ ಗುಡ್ಡವನ್ನು ಬಗೆದು ಬಯಲು ಮಾಡುವುದು, ನಿಂತ ಮರಗಳನ್ನು ಕಡಿದುರುಳಿಸುವುದು ಸರಿಯಲ್ಲ. ಸರ್ಕಾರವೇ ಪ್ರಕೃತಿ ನಿಯಮಗಳಿಗೆ ವಿರುದ್ಧವಾದ ಯೋಜನೆಗಳನ್ನು ನಡೆಸುತ್ತಿರುವುದು ಖಂಡನೀಯ. ಎ

ತ್ತಿನಹೊಳೆ ವಿಷಯದಲ್ಲಿ ಬಯಲುಸೀಮೆಗೆ ಕುಡಿಯುವ ನೀರು ಕೊಡುತ್ತೇವೆ ಎಂದು ಸರ್ಕಾರ ಜನಪರ ಕಾಳಜಿಯ ಮುಖವಾಡ ತೊಟ್ಟು, ಸಾರ್ವಜನಿಕರ ಹಣದ ಹೊಳೆ ಹರಿಸುತ್ತಿದೆ ಎಂದು ಟೀಕಿಸಿದರು. ಮನುಷ್ಯನ ಸ್ವಾರ್ಥಕ್ಕೆ ಪರಿಸರ ನಾಶವಾಗುತ್ತಿದೆ. ಪರಿಣಾಮ ಕಳೆದ ಒಂದು ದಶಕದ ಸರಾಸರಿಯಲ್ಲಿ ಶೇ 40ರಷ್ಟು ಮಳೆ ಕಡಿಮೆಯಾಗಿದೆ. ಇದು ಭವಿಷ್ಯದ ಭಾರಿ ಗಂಡಾಂತರದ ಮುನ್ಸೂಚನೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.