ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪರಮೇಶ್ವರ್ ಪರ ದಲಿತರ ಧ್ವನಿ

Published : 17 ಫೆಬ್ರುವರಿ 2015, 19:30 IST
ಫಾಲೋ ಮಾಡಿ
Comments

ಬೆಂಗಳೂರು: ದಲಿತ ಸಮುದಾಯಕ್ಕೆ ಸೇರಿದ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಅವರನ್ನು ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ತರಬೇಕು ಎಂದು ವಿವಿಧ ದಲಿತ ಸಂಘಟನೆಗಳ ಮುಖಂಡರು ಮಂಗಳವಾರ ಕಾಂಗ್ರೆಸ್ ವರಿಷ್ಠರನ್ನು ಒತ್ತಾಯಿಸಿದರು.

ಇದಕ್ಕೆ ಸ್ಪಂದಿಸದಿದ್ದರೆ ಬೃಹತ್ ರ್‍ಯಾಲಿ ಆಯೋಜಿಸಿ ಒತ್ತಡ ತರುವ ಎಚ್ಚರಿಕೆಯನ್ನೂ ಅವರು ನೀಡಿದರು. ದಲಿತ ಸಮುದಾಯದವರನ್ನು ಮುಖ್ಯಮಂತ್ರಿ ಮಾಡುವಂತೆ ಒತ್ತಾಯಿ­ಸಲು ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಈ ಸಭೆಯಲ್ಲಿ ‘ದಲಿತ ಮುಖ್ಯಮಂತ್ರಿ ಜನಾಂದೋಲನ ಕ್ರಿಯಾ ಸಮಿತಿ’ ರಚಿಸಲಾಯಿತು.

‘ಪರಮೇಶ್ವರ್ ಅವರಿಗೆ ಅನ್ಯಾಯ ಆಗಿದೆ. ಮುಖ್ಯಮಂತ್ರಿ ಸ್ಥಾನ ಪಡೆ­ಯುವ ವಿಚಾರದಲ್ಲಿ ಪರಮೇಶ್ವರ್ ಅವರು ಸಂಯಮದ ಮಾರ್ಗ ತೊರೆದು, ಸಂಘರ್ಷದ ಹಾದಿ ಹಿಡಿಯ­ಬೇಕು’ ಎಂಬ ಅಭಿಪ್ರಾಯವೂ ವ್ಯಕ್ತ­ವಾಯಿತು ಎಂದು ಗೊತ್ತಾಗಿದೆ.

ಸಿದ್ದರಾಮಯ್ಯಗೆ ವಿರೋಧವಿಲ್ಲ: ಸಭೆ­ಯಲ್ಲಿ ಅನಿಸಿಕೆ ವ್ಯಕ್ತಪಡಿಸಿದ ದಲಿತ ಸಮುದಾಯದ ಬಹುತೇಕ ಮುಖಂ­ಡರು ಸಿದ್ದರಾಮಯ್ಯ ಅವರ ವಿರುದ್ಧ ಯಾವುದೇ ಅಸಮಾಧಾನ ವ್ಯಕ್ತಪಡಿ­ಸಿಲ್ಲ. ‘ಸಿದ್ದರಾಮಯ್ಯ ವಿರುದ್ಧ ನಮಗೆ ಯಾವುದೇ ತಕರಾರು ಇಲ್ಲ. ಆದರೆ ದಲಿತರು ಕಾಂಗ್ರೆಸ್‌ ಆಡಳಿತಾವಧಿ­ಯಲ್ಲಿ ಮುಖ್ಯಮಂತ್ರಿ ಆಗದೆ ಇನ್ನು ಯಾವ ಪಕ್ಷದ ಆಡಳಿತಾವಧಿಯಲ್ಲಿ ಆಗಲು ಸಾಧ್ಯ’ ಎಂಬ ಪ್ರಶ್ನೆಯನ್ನು ಮುಂದಿಟ್ಟರು ಎಂದು ಗೊತ್ತಾಗಿದೆ.

ಅಧಿಕಾರ ಬಿಟ್ಟುಕೊಡಲಿ

ಸಿದ್ದರಾಮಯ್ಯ ಅವರಿಗೆ ಸಾಮಾ­ಜಿಕ ನ್ಯಾಯದ ಬಗ್ಗೆ ಬದ್ಧತೆ ಇದ್ದರೆ ಮುಖ್ಯಮಂತ್ರಿ ಸ್ಥಾನದಿಂದ ಇಳಿದು, ಪರಮೇಶ್ವರ್ ಅವರನ್ನು ಆ ಸ್ಥಾನಕ್ಕೆ ತರಲಿ. ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಸಿದ್ದರಾಮಯ್ಯ ನಿಭಾಯಿಸಲಿ.
ಎಂ. ವೆಂಕಟಸ್ವಾಮಿ (ಸಮತಾ ಸೈನಿಕ ದಳ)

‘ಪರಮೇಶ್ವರ್ ಅವರೇ ಮುಖ್ಯಮಂತ್ರಿ ಆಗಬೇಕು’ ಎಂದು ದಸಂಸ (ಮೂರ್ತಿ ಬಣ) ಅಧ್ಯಕ್ಷ ಎನ್. ಮೂರ್ತಿ ಒತ್ತಾಯಿಸಿದರು. ‘ಮಲ್ಲಿಕಾರ್ಜುನ ಖರ್ಗೆ, ಡಾ.ಜಿ. ಪರಮೇಶ್ವರ್, ಎಚ್. ಆಂಜನೇಯ, ಕೆ.ಎಚ್‌. ಮುನಿಯಪ್ಪ ಸೇರಿದಂತೆ ಯಾರೇ ಆದರೂ ಸರಿ, ದಲಿತರು ಆ ಸ್ಥಾನಕ್ಕೆ ಏರಿದರೆ ಸಾಕು’ ಎಂದು ಛಲವಾದಿ ಮಹಾಸಭಾ  ಮುಖಂಡ ಕೆ. ಶಿವರಾಂ ಹೇಳಿದರು.

ರಾಹುಲ್ ಭೇಟಿಗಾಗಿ ದೆಹಲಿಗೆ
ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಅವರು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ನವದೆಹಲಿಯಲ್ಲಿ ಬುಧವಾರ ಭೇಟಿ ಮಾಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ರಾಜ್ಯದ ರಾಜಕೀಯ ಪರಿಸ್ಥಿತಿ ಮತ್ತು ಕಾಂಗ್ರೆಸ್ ಸದಸ್ಯತ್ವ ಅಭಿಯಾನ ಕುರಿತು ಪರಮೇಶ್ವರ್ ಅವರು ರಾಹುಲ್ ಗಾಂಧಿ ಅವರಿಗೆ ಮಾಹಿತಿ ನೀಡಲಿದ್ದಾರೆ ಎಂದು ಗೊತ್ತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT