ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎನ್. ಧರ್ಮ ಸಿಂಗ್ ಅವರು ಗುರುವಾರ ಬೆಳಿಗ್ಗೆ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಇಲ್ಲಿನ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಬೆಳಿಗ್ಗೆ 11.30ಕ್ಕೆ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.

ತುರ್ತು ಚಿಕಿತ್ಸೆಗಾಗಿ ಧರ್ಮ ಸಿಂಗ್ ಅವರನ್ನು ಆಸ್ಪತ್ರೆಗೆ ಬೆಳಿಗ್ಗೆ 9ಕ್ಕೆ ಕರೆತರಲಾಗಿತ್ತು. 11.30ಕ್ಕೆ ತೀವ್ರ ಹೃದಯಾಘಾತದಿಂದ ನಿಧನರಾದರು ಎಂದು ಎಂ.ಎಸ್. ರಾಮಯ್ಯ ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.

ಧರ್ಮ ಸಿಂಗ್ ಅವರು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಅವರಿಗೆ 80 ವರ್ಷ ವಯಸ್ಸಾಗಿತ್ತು.

* 1936ರ ಡಿಸೆಂಬರ್ 25ರಂದು ಗುಲ್ಬರ್ಗಾ ಜಿಲ್ಲೆ ಜೇವರ್ಗಿ ತಾಲ್ಲೂಕು ನೆಲೋಗಿ ಗ್ರಾಮದಲ್ಲಿ ಜನಿಸಿದ್ದ ಧರ್ಮ ಸಿಂಗ್ ಅವರು, ಉಸ್ಮಾನಿಯಾ ವಿವಿಯಿಂದ ಎಂ.ಎ, ಎಲ್.ಎಲ್.ಬಿ. ಪದವಿ ಪಡೆದಿದ್ದರು. 2004ರಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದರು.

ಧರಂಸಿಂಗ್ ರಾಜಕೀಯ ಹಾದಿ
* 1960ರಲ್ಲಿ ಗುಲ್ಬರ್ಗಾದಲ್ಲಿ ಸಹೋದರನ ವಿರುದ್ಧ ಪಾಲಿಕೆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು.

* 1960ರಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು. ಅಲ್ಲಿಂದ ಕಾಂಗ್ರೆಸ್‌ಗೆ ನಿಷ್ಠಗಾಗಿ ದುಡಿರು.

* 1978ರಿಂದ 2008ರವರೆಗೂ ಶಾಸಕರಾಗಿದ್ದರು.

* 2004ರಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದರು.

* 2006-07ರಲ್ಲಿ ವಿಧಾನಸಭೆ ವಿಪಕ್ಷ ನಾಯಕರಾಗಿದ್ದರು.

* 2009-2014 ವರೆಗೆ ಬೀದರ್‌ನಿಂದ ಸಂಸದರಾಗಿ ಆಯ್ಕೆಯಾಗಿದ್ದರು.

* ದೇವರಾಜ್ ಅರಸ್, ಗುಂಡೂರಾವ್ ,ಬಂಗಾರಪ್ಪ, ವೀರಪ್ಪ ಮೊಯ್ಲಿ, ಎಸ್.ಎಂ. ಕೃಷ್ಣ ಅವರ ಅವಧಿಯಲ್ಲಿ ಗೃಹ, ಲೋಕೋಪಯೋಗಿ, ಅಬಕಾರಿ, ಸಮಾಜ ಕಲ್ಯಾಣ, ಕಂದಾಯ, ನಗರಾಭಿವೃದ್ದಿ ಖಾತೆಗಳ ನಿರ್ವಾಹಣೆ ಮಾಡಿದ್ದರು.

* 1996ರಿಂದ 1999ರ ವರೆಗೆ ಕೆಪಿಸಿಸಿ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದರು.

* ಸೀತರಾಮ್ ಕೇಸರಿ ಅವರ ಆಪ್ತರಾಗಿದ್ದರು. ವೀರೇಂದ್ರ ಪಾಟೀಲ್ ಅವರ ಬಳಿಕ ಗುಲ್ಬರ್ಗಾದಿಂದ ಸಿಎಂ ಆದ ರಾಜಕಾರಣಿ.

ಇದನ್ನೂ ಓದಿ...

* ಕಲಬುರ್ಗಿಯಲ್ಲಿನ ಧರ್ಮ ಸಿಂಗ್ ಮನೆಯಲ್ಲಿ ಶೋಕ; ಮಡುಗಟ್ಟಿದ ದುಃಖ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.