ಶಿವಮೊಗ್ಗ: ನೀನಾಸಮ್ ರಂಗಶಿಕ್ಷಣ ಕೇಂದ್ರವು ಮೇ 11ರಿಂದ 31ರ ವರೆಗೆ ರಂಗ ತರಬೇತಿ ಶಿಬಿರ ಆಯೋಜಿಸಿದೆ. 18ರಿಂದ 35 ವರ್ಷದ ನಡುವಿನ ಎಸ್ಸೆಸ್ಸೆಲ್ಸಿವರೆಗೆ ಓದಿದವರು ಈ ಶಿಬಿರದಲ್ಲಿ ಪಾಲ್ಗೊಳ್ಳಬಹುದು.

ಪ್ರತಿ ಶಿಬಿರಾರ್ಥಿಯು ಊಟ–ವಸತಿ ವ್ಯವಸ್ಥೆಯ ಭಾಗಶಃ ವೆಚ್ಚವಾಗಿ ಒಟ್ಟು ₹ 6,000 ಕಟ್ಟಬೇಕು. ಸೀಮಿತ ಸಂಖ್ಯೆಯ ಶಿಬಿರಾರ್ಥಿಗಳಿಗೆ ಪ್ರವೇಶವಿದ್ದು, ಅರ್ಜಿಯ ವಿವರಗಳನ್ನಾಧರಿಸಿ ಆಯ್ಕೆ ಮಾಡಲಾಗುತ್ತದೆ.

ಶಿಬಿರದಲ್ಲಿ ರಂಗಶಿಕ್ಷಣ ಕೇಂದ್ರದ ಅಧ್ಯಾಪಕರು ತರಬೇತಿ ನಡೆಸಿಕೊಡುತ್ತಾರೆ. ನುರಿತ ನಿರ್ದೇಶಕರಿಂದ ರಂಗನಾಟಕ ಪ್ರಯೋಗಗಳನ್ನೂ ಮಾಡಿಸಲಾಗುತ್ತದೆ. ಅಭಿನಯ ವ್ಯಾಯಾಮಕ್ಕೆ ಅಗತ್ಯವಾದ ದೇಹದಾರ್ಢ್ಯ ಇರಬೇಕು.

ಆಸಕ್ತ ಅಭ್ಯರ್ಥಿಗಳು ನೀನಾಸಮ್‌ನಿಂದ ಪ್ರವೇಶ ಪತ್ರವನ್ನು ತರಿಸಿಕೊಂಡು, ಏ.10ರೊಳಗೆ ಭರ್ತಿ ಮಾಡಿದ ಅರ್ಜಿಗಳನ್ನು ಕಳುಹಿಸಬೇಕು. www.ninasam.org ವೆಬ್‌ಸೈಟ್ ಬಳಸಿಯೂ ಅರ್ಜಿ ಸಲ್ಲಿಸಬಹುದು. ಆಯ್ಕೆಯಾದವರಿಗೆ ಏ.30ರೊಳಗೆ ತಿಳಿಸಲಾಗುತ್ತದೆ.

ಸಂಪರ್ಕ ವಿಳಾಸ: ಸಂಚಾಲಕರು, ನೀನಾಸಮ್ ರಂಗಶಿಕ್ಷಣ ಕೇಂದ್ರ,
ಹೆಗ್ಗೋಡು, ಸಾಗರ, ಶಿವಮೊಗ್ಗ ಜಿಲ್ಲೆ –577 417.

ಫೋನ್‌ನಂ: 08183-265646.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.