ಶಿರಸಿ (ಉತ್ತರ ಕನ್ನಡ): ಮೈಸೂರಿನಲ್ಲಿರುವ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಸಚಿವ ಡಾ. ನಿರಂಜನ ವಾನಳ್ಳಿ ನಿರ್ದೇಶಿಸಿರುವ ‘ಲೈಲಾ ಗೋಲ್ಡ್’ ಕಿರುಚಿತ್ರಕ್ಕೆ ರಾಷ್ಟ್ರೀಯ ಪುರಸ್ಕಾರ ದೊರೆತಿದೆ.

ಕೇಂದ್ರ ಸರ್ಕಾರದ ಪಂಚಾಯತ್‌ರಾಜ್ ಸಚಿವಾಲಯ ಪಂಚಾಯತ್‌ರಾಜ್ ಸಂಸ್ಥೆಗಳ ಕುರಿತು ಆಯೋಜಿಸಿದ್ದ ಕಿರುಚಿತ್ರ ಸ್ಪರ್ಧೆಯಲ್ಲಿ ಶಿರಸಿ ತಾಲ್ಲೂಕು ವಾನಳ್ಳಿ ಮೂಲದ ನಿರಂಜನ ರಚಿಸಿ, ನಿರ್ದೇಶಿಸಿದ್ದ ಈ ಚಿತ್ರ ಪ್ರಥಮ ಸ್ಥಾನ ಪಡೆದಿದೆ.

ಪುರಸ್ಕಾರವು ₹ 7.50 ಲಕ್ಷ ನಗದು ಮತ್ತು ಪ್ರಶಸ್ತಿ ಫಲಕ ಒಳಗೊಂಡಿದೆ. ಬುಧವಾರ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುರಸ್ಕಾರ ಪ್ರದಾನ ಮಾಡಲಾಯಿತು. ಸ್ಪರ್ಧೆಗೆ 510 ಕಿರುಚಿತ್ರಗಳು ಬಂದಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.