ಧಾರವಾಡ: ತಮ್ಮ ಕವಿತೆಗಳ ಪುಸ್ತಕಗಳನ್ನು ಸೈಕಲ್‌ನಲ್ಲೇ ಸುತ್ತಾಡಿ ಮಾರಾಟ ಮಾಡುತ್ತಿದ್ದ ಸರಳ ಜೀವಿ ವಿ.ಸಿ.ಐರಸಂಗ ಶನಿವಾರ ನಡೆದ ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಮೆರವಣಿಗೆಯಲ್ಲೂ ಸೈಕಲ್‌ನಲ್ಲೇ ಸಾಗುವ ಮೂಲಕ ಎಲ್ಲರ ಗಮನಸೆಳೆದರು.

ಸಮ್ಮೇಳನದ ಅಧ್ಯಕ್ಷರಾದ 87 ವರ್ಷದ ಐರಸಂಗ, ‘ಕನ್ನಡಕ್ಕಾಗಿ ನಡಿಗೆ’ ಕಾರ್ಯಕ್ರಮದಲ್ಲಿ ಕೆಲಹೊತ್ತು ಸಾಹಿತ್ಯಾಸಕ್ತರ ಜತೆ ಹೆಜ್ಜೆ ಹಾಕಿದರು.

ನಂತರ ವೇದಿಕೆಗೆ ಕಾರಿನಲ್ಲಿ ಹೋಗುವಂತೆ ಸಂಘಟಕರು ಕೇಳಿಕೊಂಡರೂ ನಯವಾಗಿ ನಿರಾಕರಿಸಿ, ಸಮ್ಮೇಳನದ ವೇದಿಕೆವರೆಗೂ ತಮ್ಮ ಸೈಕಲ್‌ನಲ್ಲೇ ತೆರಳಿದರು. ಅವರನ್ನು ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಸೇರಿದಂತೆ ಇತರ ಸಾಹಿತ್ಯಾಸಕ್ತರು ಹಿಂಬಾಲಿಸಿದರು.

ಸಮ್ಮೇಳನದಲ್ಲಿ ಆಶಯ ಭಾಷಣ ಮಾಡಿದ ಸಾಹಿತಿ ಶಾಂತಿನಾಥ ದಿಬ್ಬದ ಅವರು, ಐರಸಂಗ ಅವರಿಗಲ್ಲದೆ ಅವರ ಸೈಕಲ್ಲಿಗೂ ನಮಸ್ಕಾರ ತಿಳಿಸಿದರು.

ಇವತ್ತಿನ ಹೈಟೆಕ್ ಸಾಹಿತಿಗಳ ಮಧ್ಯೆ ಇಂತಹ ಸರಳ ಕವಿ ಇರುವುದು ಅಪರೂಪ. ಸಾಹಿತಿಗಳು ಇಂದು ಐರಸಂಗ ಅವರಂತೆಯೇ ಸರಳತೆ ಹಾಗೂ ಸಹಿಷ್ಣುತೆ ಬೆಳೆಸಿಕೊಳ್ಳುವ ಅಗತ್ಯವಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.