ಬೆಂಗಳೂರು: ಮಾಜಿ ಸಚಿವ ಬಿ. ಸುಬ್ಬಯ್ಯ ಶೆಟ್ಟಿ ಅವರಿಗೆ ವಿಧಾನಸೌಧದಲ್ಲಿ ಬುಧವಾರ ‘ದೇವರಾಜ ಅರಸು’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರ 99ನೇ ಜನ್ಮದಿನಾಚರಣೆ ಅಂಗವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಸುಬ್ಬಯ್ಯ ಶೆಟ್ಟರು ಮಾತನಾಡಿ, ‘ವಿನೋಭಾ ಭಾವೆ ಅವರ ಭೂದಾನ ಯಜ್ಞ, ಇಂದಿರಾಗಾಂಧಿಯವರ ಗರೀಬಿ ಹಟಾವೋ ಮುಂತಾದ ಕಾರ್ಯಕ್ರಮಗಳು ಅರಸು ಅವರಿಗೆ ಸ್ಫೂರ್ತಿಯಾಗಿದ್ದವು’ ಎಂದರು.

‘ಪ್ರಶಸ್ತಿ ಪ್ರದಾನ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ‘ಕರ್ನಾಟಕದಲ್ಲಿ ಭೂಸುಧಾರಣೆಗೆ ಸಂಬಂಧಿಸಿದಂತೆ ಯಾವುದೇ ಹೋರಾಟ ಇಲ್ಲದಿದ್ದರೂ ಅರಸು ಅವರು ಭೂ-ಸುಧಾರಣಾ ಕಾಯ್ದೆಯನ್ನು ಜಾರಿಗೆ ತಂದರು. ಸಾಮಾಜಿಕ ನ್ಯಾಯದಲ್ಲಿ ಬದ್ಧತೆ ಇರುವವರು ಮಾತ್ರ ಇಂಥ ಕಾನೂನು ತರಲು ಸಾಧ್ಯ’ ಎಂದು ಅವರು ಹೇಳಿದರು.

ಅವರ ಸಂಪುಟದಲ್ಲಿ ಸಚಿವರಾಗಿದ್ದ ಸುಬ್ಬಯ್ಯ ಶೆಟ್ಟರು ತಮ್ಮ ಜಮೀನನ್ನೇ ಬಡವರಿಗೆ ಕೊಟ್ಟು ಕಾಯ್ದೆಯನ್ನು ಸ್ವತಃ ಜಾರಿಗೊಳಿಸಿದ್ದರು. ಇಂಥ ಮೌಲ್ಯಯುತ ರಾಜಕಾರಣಿಗೆ ಅರಸು ಹೆಸರಿನ ಪ್ರಶಸ್ತಿ ನೀಡುತ್ತಿರುವುದು ಪ್ರಶಸ್ತಿಯ ಗೌರವವನ್ನು ಹೆಚ್ಚಿಸಿದೆ ಎಂದರು.

ಆಲೋಚಿಸಿ:  ಸಾಮಾಜಿಕ ನ್ಯಾಯದ ಪರ ಯಾರಿದ್ದಾರೆ, ವಿರೋಧವಾಗಿ ಯಾರಿದ್ದಾರೆ ಎಂಬುದನ್ನು ಹಿಂದುಳಿದ ವರ್ಗದ ಜನರು ಮೊದಲು ಅರ್ಥ ಮಾಡಿಕೊಳ್ಳಬೇಕು. ಆ ನಂತರ ಸರಿಯಾದ ತೀರ್ಮಾನಗಳನ್ನೇ ಮಾಡಬೇಕು ಎಂದು ಅವರು ಸೂಚ್ಯವಾಗಿ ಹೇಳಿದರು.

ಶತಮಾನೋತ್ಸವಕ್ಕೆ ಸಿದ್ಧತೆ: ಮುಂದಿನ ವರ್ಷ ನಡೆಯಲಿರುವ ಅರಸು ಜನ್ಮ ಶತಮಾನೋತ್ಸವದ ಅದ್ದೂರಿ, ಅರ್ಥಪೂರ್ಣ ಆಚರಣೆಗೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಲು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಅವರಿಗೆ ಮುಖ್ಯಮಂತ್ರಿ ಸೂಚಿಸಿದರು.

ಪಾರದರ್ಶಕ ಆಯ್ಕೆ: ಆಂಜನೇಯ ಮಾತನಾಡಿ, ಪ್ರಶಸ್ತಿಗೆ ಪಾರದರ್ಶಕವಾಗಿ ಅರ್ಹರನ್ನು ಆಯ್ಕೆ ಮಾಡಬೇಕು ಎಂಬ ಉದ್ದೇಶದಿಂದ ಕೆ.ಮರುಳಸಿದ್ದಪ್ಪ ಅಧ್ಯಕ್ಷತೆಯ ಸಮಿತಿಗೆ ಜವಾಬ್ದಾರಿಯನ್ನು ನೀಡಲಾಗಿತ್ತು. ಇದರಲ್ಲಿ ಸರ್ಕಾರದ ಹಸ್ತಕ್ಷೇಪ ಇರಲಿಲ್ಲ ಎಂದರು.
ಇದೇ ಸಂದರ್ಭದಲ್ಲಿ ಅರಸು ಸಂಶೋಧನಾ ಸಂಸ್ಥೆ ಹೊರತಂದ ಡಿವಿಡಿಗಳನ್ನು ಮುಖ್ಯಮಂತ್ರಿ ಬಿಡುಗಡೆ ಮಾಡಿದರು. ಹೆಚ್ಚು ಅಂಕ ಪಡೆದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ಕೊಟ್ಟು ಅಭಿನಂದಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.