ಮನಿಲಾ:ದಕ್ಷಿಣ ಪಿಲಿಪೈನ್ಸ್‌ನ ಮುಸ್ಲಿಮರೇ ಹೆಚ್ಚಾಗಿರುವ ದ್ವೀಪದಲ್ಲಿನ ಚರ್ಚ್‌ನಲ್ಲಿ ಬಾನುವಾರ ಎರಡು ಬಾಂಬ್ ಸ್ಫೋಟ ಸಂಭವಿಸಿ, ಹಿಂಸಾಚಾರದಲ್ಲಿ ನಾಗರಿಕರು ಹಾಗೂ ಭದ್ರತಾ ಸಿಬ್ಬಂದಿ ಸೇರಿ 19 ಜನ ಮೃತಪಟ್ಟಿದ್ದಾರೆ ಎಂದು ಮಿಲಿಟರಿ ತಿಳಿಸಿದೆ.

ಸುಲು ಪ್ರಾಂತ್ಯದ ಜೊಲೊ ಕ್ಯಥೆಡ್ರಾಲ್ ಚರ್ಚ್‌ನ ಒಳಗೆ ಮೊದಲ ಬಾಂಬ್ ಸ್ಫೋಟಗೊಂಡಿದ್ದು, ಎರಡನೇ ಬಾಂಬ್ ವಾಹನಗಳ ನಿಲುಗಡೆ ಸ್ಥಳದಲ್ಲಿ ಸಂಭವಿಸಿದೆ.

ಅಬು ಸಯಯಾಫ್ ಭಯೋತ್ಪಾದನಾ ಗುಂಪು ಈ ದಾಳಿ ನಡೆಸಿದೆ ಎನ್ನಲಾಗಿದೆ.

ಬಾಂಬ್ ದಾಳಿಯಲ್ಲಿ ಐವರು ಸೈನಿಕರು ಹಾಗೂ 12 ನಾಗರಿಕರು ಮೃತಪಟ್ಟಿದ್ದಾರೆ ಎಂದು ಸಶಸ್ತ್ರ ಪಡೆಗಳ ವಕ್ತಾರ ಎಡ್ಗಾರ್ಡ್ ಅರೆವಾಲೊ ಅವರು ಡಿಜೆಎಂಎಂ ರೆಡಿಯೊಕ್ಕೆ ತಿಳಿಸಿದ್ದಾರೆ.

ದೇಶದಲ್ಲಿ ಸರ್ಕಾರ ಮತ್ತು ಅಬು ಸಯಯಾಫ್ ಮುಸ್ಲಿಂ ಪ್ರತ್ಯೇಕವಾದಿಗಳ ಗುಂಪುಗಳ ಮಧ್ಯೆ ಹೋರಾಟ ನಡೆಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.