ಉಕ್ರೇನ್ನ ಮತ್ತೆರಡು ಗ್ರಾಮಗಳು ರಷ್ಯಾ ವಶಕ್ಕೆ
ಉಕ್ರೇನ್ನ ಪೂರ್ವಭಾಗದ ಮತ್ತೆರಡು ಗ್ರಾಮಗಳು ತಮ್ಮ ವಶವಾಗಿವೆ ಎಂದು ರಷ್ಯಾ ಪ್ರತಿಪಾದಿಸಿಕೊಂಡಿದೆ. ಈ ಎರಡು ಗ್ರಾಮಗಳಿಗಾಗಿ ಉಭಯ ರಾಷ್ಟ್ರಗಳ ನಡುವೆ ಹಲವು ತಿಂಗಳುಗಳಿಂದ ನಡೆಯುತ್ತಿರುವ ಯುದ್ಧದಲ್ಲಿ ರಷ್ಯಾ ಮೇಲುಗೈ ಸಾಧಿಸಿದ್ದು ಈ ಗ್ರಾಮಗಳನ್ನು ಉಳಿಸಿಕೊಳ್ಳುವ ಯತ್ನದಲ್ಲಿ ಉಕ್ರೇನ್ ಹಿನ್ನಡೆ ಅನುಭವಿಸಿದೆ. ಈ ಕುರಿತು ಪ್ರತಿಕ್ರಿಯಿಸಿದ ರಷ್ಯಾದ ರಕ್ಷಣಾ ಸಚಿವಾಲಯ ‘ಡೊನೆಟ್ಸ್ಕ್ ಪ್ರಾಂತ್ಯದಲ್ಲಿ ಉಕ್ರೇನ್ನ ಸೇನೆಯನ್ನು ರಷ್ಯಾ ಸೇನೆ ಹಿಮ್ಮೆಟ್ಟಿಸಿದೆ. ಇದೀಗ ನವೂಲೇಕ್ಸ್ಯಾನ್ಡ್ರೈವ್ಸ್ಕಾ ಪ್ರದೇಶವು ಸ್ವತಂತ್ರವಾಗಿದೆ’ ಎಂದು ಹೇಳಿದೆ.