ನವದೆಹಲಿ: ರಷ್ಯಾದಲ್ಲಿ ಸಿಲುಕಿದ್ದ ಪ್ರಯಾಣಿಕರ ನೆರವಿಗಾಗಿ ಏರ್ ಇಂಡಿಯಾ ಕಳುಹಿಸಿದ್ದ 'ಎಐ1179' ವಿಮಾನ, ಅಲ್ಲಿನ ಕ್ರಾಸ್ನಾಯಾರ್ಕ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೊದತ್ತ ಪ್ರಯಾಣ ಬೆಳೆಸಿದೆ.

ಈ ಕುರಿತು ಏರ್ ಇಂಡಿಯಾ ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಮಾಹಿತಿ ಹಂಚಿಕೊಂಡಿದೆ.

ರಾಷ್ಟ್ರ ರಾಜಧಾನಿ ನವದೆಹಲಿಯಿಂದ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೊಗೆ ಹೊರಟಿದ್ದ ಏರ್ ಇಂಡಿಯಾದ 'ಎಐ183' ವಿಮಾನ, ತಾಂತ್ರಿತ ದೋಷದಿಂದಾಗಿ ರಷ್ಯಾದ ಕ್ರಾಸ್ನಾಯಾರ್ಕ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು.

ಈ ಏರ್ ಇಂಡಿಯಾ ವಿಮಾನದಲ್ಲಿ 225 ಪ್ರಯಾಣಿಕರು ಹಾಗೂ 19 ಸಿಬ್ಬಂದಿ ಇದ್ದರು.

ಇದರ ಬೆನ್ನಲ್ಲೇ ನೆರವಿಗಾಗಿ ಮತ್ತೊಂದು ವಿಮಾನವನ್ನು ಏರ್ ಇಂಡಿಯಾ ರವಾನಿಸಿತ್ತು. ಎಲ್ಲ ಪ್ರಯಾಣಿಕರು ಹಾಗೂ ಸಿಬ್ಬಂದಿಗಳನ್ನು ಹೊತ್ತುಕೊಂಡ ಈ ವಿಶೇಷ ವಿಮಾನವು ರಷ್ಯಾದಿಂದ ಸ್ಯಾನ್ ಫ್ರಾನ್ಸಿಸ್ಕೊದತ್ತ ಹೊರಟಿದೆ.

ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ಕ್ಲಿಯರನ್ಸ್, ವೈದ್ಯಕೀಯ ಸೇರಿದಂತೆ ಪ್ರಯಾಣಿಕರಿಗೆ ಬೇಕಾದ ಎಲ್ಲ ನೆರವನ್ನು ಒದಗಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಏರ್ ಇಂಡಿಯಾ ತಿಳಿಸಿದೆ.
.AI183 ತುರ್ತು ಭೂಸ್ಪರ್ಶ: ರಷ್ಯಾಕ್ಕೆ ಮತ್ತೊಂದು ವಿಮಾನ ಕಳುಹಿಸಿದ ಏರ್ ಇಂಡಿಯಾ.ತಾಂತ್ರಿಕ ದೋಷ: ಅಮೆರಿಕಕ್ಕೆ ಹೊರಟಿದ್ದ ಏರ್ ಇಂಡಿಯಾ ವಿಮಾನ ರಷ್ಯಾದಲ್ಲಿ ಲ್ಯಾಂಡ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.