ಮಾಪುಟೊ: ಮೊಝಾಂಬಿಕ್ನ ಉತ್ತರ ಕರಾವಳಿ ಭಾಗದಲ್ಲಿ ಭಾನುವಾರ ದೋಣಿಯೊಂದು ಮಗುಚಿಬಿದ್ದ ಪರಿಣಾಮ ಮಕ್ಕಳು ಸೇರಿದಂತೆ 96 ಮಂದಿ ಸಾವಿಗೀಡಾಗಿದ್ದು, 26 ಜನ ನಾಪತ್ತೆಯಾಗಿದ್ದಾರೆ.

130 ಜನರನ್ನು ಹೊತ್ತಿದ್ದ ದೋಣಿಯು ಲುಂಗಾದಿಂದ ಮೊಝಾಂಬಿಕ್ ದ್ವೀಪಕ್ಕೆ ಪ್ರಯಾಣಿಸುತ್ತಿತ್ತು. ಸಮುದ್ರದ ಮಾರುತಗಳ ಹೊಡೆತದಿಂದ ಈ ದುರ್ಘಟನೆ ಸಂಭವಿಸಿರಬಹುದೆಂದು ಪ್ರಾಥಮಿಕ ವರದಿಗಳು ತಿಳಿಸಿವೆ’ ಎಂದು ಹಿರಿಯ ಅಧಿಕಾರಿ ಲಾರೆಂಕೊ ಮಚಾಡೊ ಅವರು ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆಗೆ ಸೋಮವಾರ ತಿಳಿಸಿದ್ದಾರೆ.

‘ದುರಂತಕ್ಕೀಡಾದ ಮೀನುಗಾರಿಕಾ ದೋಣಿಯಲ್ಲಿದ್ದ ಜನರ ಸಂಖ್ಯೆ ಮಿತಿ ಮೀರಿತ್ತು ಮತ್ತು ಅವರನ್ನು ಸಾಗಿಸಲು ಪರವಾನಗಿ ಪಡೆದಿರಲಿಲ್ಲ’ ಎಂದು ಮಾಹಿತಿ ನೀಡಿದ್ದಾರೆ.

‘ಕಾಲರಾದಿಂದ ಪಾರಾಗಲು ಜನ ವಲಸೆ ಹೋಗುತ್ತಿದ್ದರು’ ಎಂದು ಅಧಿಕಾರಿಯೊಬ್ಬರು ಹೇಳಿರುವುದಾಗಿ ಮಾಧ್ಯಮ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.