ಲಾಹೋರ್: ಪಾಕಿಸ್ತಾನದ ಮೊದಲ ಮಹಿಳಾ ಪ್ರಧಾನಿ ಬೆನಜೀರ್ ಭುಟ್ಟೋ ಅವರ ಹತ್ಯೆ ಮೊಕದ್ದಮೆಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಸಲು ಪಾಕಿಸ್ತಾನದ ಲಾಹೋರ್ ಹೈಕೋರ್ಟ್ ಐದು ವರ್ಷಗಳ ಬಳಿಕ ದಿನಾಂಕ ನಿಗದಿಪಡಿಸಿದೆ ಎಂದು ಅಲ್ಲಿಯ ಮಾಧ್ಯಮವೊಂದು ವರದಿ ಮಾಡಿದೆ.

ಲಾಹೋರ್ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಮಹಮ್ಮದ್ ಅಮೀರ್ ಭತ್ತಿ ಅವರು ಈ ಅರ್ಜಿಗಳ ವಿಚಾರಣೆಗಾಗಿ ವಿಶೇಷ ವಿಭಾಗೀಯ ಪೀಠವನ್ನು ರಚಿಸಿದ್ದಾರೆ. ಹತ್ಯೆ ಮೊಕದ್ದಮೆಗೆ ಸಂಬಂಧಿಸಿದ 8 ಅರ್ಜಿಗಳ ವಿಚಾರಣೆಯನ್ನು ಪೀಠವು ಗುರುವಾರ ಕೈಗೆತ್ತಿಕೊಳ್ಳಲಿದೆ ಎಂದು ‘ದಿ ಎಕ್ಸ್ಪ್ರೆಸ್ ಟ್ರಿಬ್ಯೂನಲ್’ ವರದಿ ಮಾಡಿದೆ.

ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ ಸಹ ಮುಖ್ಯಸ್ಥ, ಮಾಜಿ ಅಧ್ಯಕ್ಷ ಆಸಿಫ್ ಝರ್ದಾರಿ, ಪ್ರಕರಣದ ಎಲ್ಲಾ ಐದು ಆರೋಪಿಗಳು, ದೋಷ ಸಾಬೀತಾಗಿರುವ ಇಬ್ಬರು ಪೊಲೀಸರಿಗೆ ನೋಟಿಸ್ ನೀಡಲಾಗಿದೆ ಎಂದು ಪೀಠ ಹೇಳಿದೆ. ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರಿಗೂ ನೋಟಿಸ್ ನೀಡಿದ್ದು ಅವರು ಈಚೆಗೆ ನಿಧನರಾಗಿರುವ ಕಾರಣ ಅವರ ವಿರುದ್ಧದ ಅರ್ಜಿಗಳು ವಜಾ ಆಗುವ ನಿರೀಕ್ಷೆಯಿದೆ ಎನ್ನಲಾಗಿದೆ.

ಐವರು ಆರೋಪಿಗಳಲ್ಲಿ ಮೂವರು ಕೋರ್ಟ್ಗೆ ಹಾಜರಾಗಲಿದ್ದಾರೆ. ಇನ್ನಿಬ್ಬರಲ್ಲಿ ಒಬ್ಬನು ಅಡಿಯಾಲ ಜೈಲಿನಲ್ಲಿ ಶಿಕ್ಷೆಗೀಡಾಗಿದ್ದಾನೆ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ.

ಬೆನಜೀರ್ ಅವರು 2007ರ ಡಿಸೆಂಬರ್ 27ರಂದು ರಾವಲ್ಪಿಂಡಿಯಲ್ಲಿ ಚುನಾವಣಾ ರ್ಯಾಲಿ ನಡೆಸುತ್ತಿದ್ದ ವೇಳೆ ಗ್ರೆನೇಡ್ ದಾಳಿಗೆ ಬಲಿಯಾದರು. ಅದಕ್ಕೂ ಮುನ್ನ ರ್ಯಾಲಿಗೆ ಬಿಗಿ ಭದ್ರತೆ ಒದಗಿಸುವಂತೆ ಅವರು ಅಂದಿನ ಅಧ್ಯಕ್ಷ ಪರ್ವೇಜ್ ಮುಷರಫ್ ಅವರಿಗೆ ಮನವಿ ಮಾಡಿದ್ದರು ಆದರೆ ಮನವಿಯನ್ನು ಮುಷರಫ್ ತಿರಸ್ಕರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.