ಕಠ್ಮಂಡು( ನೇಪಾಳ): ಇಸ್ರೇಲ್‌ನಲ್ಲಿ ಹಮಾಸ್ ದಾಳಿಯಲ್ಲಿ ಮೃತಪಟ್ಟಿದ್ದ ನೇಪಾಳದ ನಾಲ್ವರು ವಿದ್ಯಾರ್ಥಿಗಳ ಮೃತದೇಹಗಳನ್ನು ಭಾನುವಾರ ಕಠ್ಮಂಡುವಿಗೆ ತರಲಾಗಿದ್ದು, ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.

ನೇಪಾಳದ ವಿದೇಶಾಂಗ ಸಚಿವ ನಾರಾಯಣ ಪ್ರಸಾದ್ ಸೌದ್, ನೇಪಾಳದಲ್ಲಿನ ಇಸ್ರೇಲ್ ರಾಯಭಾರಿ ಸೇರಿದಂತೆ ಇತರ ಸರ್ಕಾರಿ ಅಧಿಕಾರಿಗಳು ಕಠ್ಮಂಡು ವಿಮಾನ ನಿಲ್ದಾಣದಲ್ಲಿ ಶ್ರದ್ಧಾಂಜಲಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಇಸ್ರೇಲ್ ರಾಯಭಾರಿ ಹನನ್ ಗೊಡೆರ್, 'ಇಸ್ರೇಲ್‌ನಲ್ಲಿ 1400 ಶವಗಳಿವೆ. ಅವುಗಳನ್ನು ಗುರುತಿಸಲಾಗುತ್ತಿದೆ. ಎಲ್ಲ ವಿದ್ಯಾರ್ಥಿಗಳ ಗುರುತು ಪತ್ತೆಯಾಗಿಲ್ಲ. ಇಂದು 4 ಮೃತದೇಹಗಳನ್ನು ತರಲಾಗಿದೆ. ಇನ್ನೆರೆಡು ದಿನದಲ್ಲಿ ಮತ್ತೊಂದು ಮೃತದೇಹವನ್ನು ತರಲಾಗುವುದು. ಇನ್ನುಳಿದ 5 ಮೃತ ದೇಹಗಳನ್ನು ಗುರುತಿಸುತ್ತೇವೆ. ಇದು ನಮ್ಮ ಜವಾಬ್ದಾರಿ' ಎಂದರು.

ಇಸ್ರೇಲ್ ಸರ್ಕಾರ ನಾಲ್ವರು ಕೃಷಿ ವಿದ್ಯಾರ್ಥಿಗಳ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಯನ್ನು ಪೂರ್ಣಗೊಳಿಸಿದ ನಂತರ ಇಸ್ರೇಲ್‌ನಲ್ಲಿರುವ ನೇಪಾಳ ರಾಯಭಾರ ಕಚೇರಿಗೆ ಹಸ್ತಾಂತರಿಸಿತ್ತು. ನಾರಾಯಣ ಪ್ರಸಾದ್ ನ್ಯೂಪಾನೆ, ಲೋಕೇಂದ್ರ ಸಿಂಗ್ ಧಾಮಿ, ದಿಪೇಶ್ ರಾಜ್ ಬಿಸ್ತಾ ಮತ್ತು ಆಶಿಶ್ ಚೌಧರಿ ಅವರ ಮೃತದೇಹಗಳನ್ನು ಇಂದು ಕಠ್ಮಂಡುವಿಗೆ ತರಲಾಗಿದೆ.

ಕುಟುಂಬಕ್ಕೆ ಸಾಂತ್ವನ ಹೇಳಲು ಮತ್ತು ಸಂಬಂಧಿಕರಿಗೆ ಮೃತದೇಹವನ್ನು ಹಸ್ತಾಂತರಿಸಲು ಇಸ್ರೇಲ್ ರಾಯಭಾರಿ ಪಶ್ಚಿಮ ನೇಪಾಳದ ಪ್ರಾಂತೀಯ ಪ್ರಧಾನ ಕಛೇರಿ ಧಂಗಾಧಿಗೆ ತೆರಳಿದ್ದಾರೆ.

ಅಕ್ಟೋಬರ್ 7 ರಂದು ಇಸ್ರೇಲ್–ಹಮಾಸ್ ಸಂಘರ್ಷದಲ್ಲಿ ನೇಪಾಳದ 10 ಮಂದಿ ಕೃಷಿ ವಿದ್ಯಾರ್ಥಿಗಳು ಹತ್ಯೆಗೀಡಾಗಿದ್ದರು.
.Israel Hamas conflict: ರಾಕೆಟ್ ದಾಳಿಗೆ ನೇಪಾಳದ 10 ವಿದ್ಯಾರ್ಥಿಗಳು ಸಾವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.