ಒಟ್ಟಾವ: ಮಾದಕದ್ರವ್ಯ ವ್ಯಸನಿ ಹಾಗೂ ಸುಮಾರು 50ಕ್ಕೂ ಹೆಚ್ಚು ಮಹಿಳೆಯರನ್ನು ಕೊಲೆಗೈದು, ದೇಹವನ್ನು ತುಂಡರಿಸಿ ವಿಕೃತಿ ಮರೆಯುತ್ತಿದ್ದ ಕೆನಡಾದ ಸರಣಿ ಹಂತಕ ರಾಬರ್ಟ್ ಪಿಕ್ಟನ್, ಜೈಲಿನಲ್ಲಿ ಕೈದಿಯೊಬ್ಬ ನಡೆಸಿದ ದಾಳಿಯಲ್ಲಿ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.

ಕೆನಡಾದ ರ್ಯಾಮ್ಶ್ಯಾಕಲ್ನಲ್ಲಿದ್ದ ಜಾಗದಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಆರು ಮಹಿಳೆಯರ ಮೃತದೇಹಕ್ಕೆ ಸಂಬಂಧಿಸಿದಂತೆ 2007ರಲ್ಲಿ ಈತ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ.

ಗರಿಷ್ಠ ಶಿಕ್ಷೆಗೆ ಗುರಿಯಾಗಿದ್ದ ಈತ ಕೊಲೆ ಮಾಡಿದ್ದ ಇನ್ನೂ 20 ಮಹಿಳೆಯರ ಸಾವಿನ ಪ್ರಕರಣವನ್ನು ಸರ್ಕಾರಿ ಅಭಿಯೋಜಕರು ಕೈಬಿಟ್ಟಿದ್ದರು.

‘ಅಲ್ಲಿಂದ ಈತ ಜೈಲಿನಲ್ಲೇ ಇದ್ದ. ಆದರೆ ಮೇ 19ರಂದು ಪಿಕ್ಟನ್ ಮೇಲೆ ಅದೇ ಜೈಲಿನಲ್ಲಿದ್ದ ಮತ್ತೊಬ್ಬ ಕೈದಿ ಗಂಭೀರ ಸ್ವರೂಪದ ಹಲ್ಲೆ ನಡೆಸಿದ್ದ’ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.

ಮಾದಕದ್ರವ್ಯ ವ್ಯಸನಿಯಾಗಿದ್ದ ಈತ ಮಹಿಳೆಯರನ್ನು ಕೊಲ್ಲುತ್ತಿದ್ದ. ನಂತರ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದಲ್ಲಿರುವ ತನ್ನ ಹಂದಿ ಫಾರ್ಮ್ನಲ್ಲಿ ಮೃತದೇಹವನ್ನು ತುಂಡರಿಸಿ ವಿಕೃತಿ ಮೆರೆಯುತ್ತಿದ್ದ. ಈ ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಇಡೀ ಕೆನಡಾ ಬೆಚ್ಚಿ ಬಿದ್ದಿತ್ತು.

2002ರಲ್ಲಿ ಪಿಕ್ಟನ್ ಬಂಧನ ಆಗುವವರೆಗೂ ಸುಮಾರು ಒಂದು ದಶಕಗಳ ಕಾಲ ಕಳಪೆ ಮಾದಕದ್ರವ್ಯಗಳ ವ್ಯಸನ ವ್ಯಾಪಕವಾಗಿದ್ದ ಡೌನ್ಟೌನ್ ಈಸ್ಟ್ಸೈಡ್ ಪ್ರಾಂತ್ಯದಲ್ಲಿ ಸುಮಾರು 60ಕ್ಕೂ ಹೆಚ್ಚು ಮಹಿಳೆಯರು ಕಣ್ಮರೆಯಾಗಿದ್ದರು. ಇವರಲ್ಲಿ ಸ್ಥಳೀಯರೇ ಆದ ಸುಮಾರು 33 ಮಹಿಳೆಯರಿಗೆ ಸೇರಿದ ಡಿಎನ್ಎ ಸಾಕ್ಷಿಗಳು ಡೌನ್ಟೌನ್ ವ್ಯಾಂಕ್ಓವರ್ನಿಂದ 25 ಕಿ.ಮೀ. ದೂರದಲ್ಲಿರುವ ಪಿಕ್ಟನ್ಗೆ ಸೇರಿದ್ದ ಹಂದಿ ಫಾರ್ಮ್ನಲ್ಲಿ ಪೊಲೀಸರಿಗೆ ದೊರೆತಿದ್ದವು.

2016ರಲ್ಲಿ ಪಿಕ್ಟನ್ ಬರೆದಿದ್ದ ಪುಸ್ತಕವೊಂದು ಅಮೆಜಾನ್ನಲ್ಲಿ ಮಾರಾಟವಾಗುತ್ತಿದೆ ಎಂದು ಪ್ರಕಟವಾದ ಕೆಲವೇ ಕ್ಷಣಗಳಲ್ಲಿ ಅದನ್ನು ಹಿಂಪಡೆಯಲಾಗಿತ್ತು. ಆ ಪುಸಕ್ತದಲ್ಲಿ ಆತ, ತಾನೊಬ್ಬ ಮುಗ್ದ. ಆದರೆ ಪೊಲೀಸರು ತನ್ನನ್ನು ಈ ಪ್ರಕರಣದಲ್ಲಿ ಅನಗತ್ಯವಾಗಿ ಸಿಲುಕಿಸಿದ್ದಾರೆ ಎಂದು ಆರೋಪಿಸಿದ್ದ ಎಂದು ಸನ್ ಪತ್ರಿಕೆ ವರದಿ ಮಾಡಿತ್ತು. ಇದಾದ ಬೆನ್ನಲ್ಲೇ ಪ್ರಕಾಶಕರು ಪುಸ್ತಕವನ್ನು ಹಿಂಪಡೆದರು. ಜತೆಗೆ ಮೃತ ಮಹಿಳೆಯರ ಕುಟುಂಬದವರ ಕ್ಷಮೆ ಕೋರಿದ್ದರು ಎಂದು ಎನ್ಡಿಟಿವಿ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.