ಸೋಮವಾರ, 23 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭೂಮಿಗೆ ಮರಳಿದ ‘ಸೊಯುಜ್‌’ ಅಂತರಿಕ್ಷ ನೌಕೆ

Published : 23 ಸೆಪ್ಟೆಂಬರ್ 2024, 16:23 IST
Last Updated : 23 ಸೆಪ್ಟೆಂಬರ್ 2024, 16:23 IST
ಫಾಲೋ ಮಾಡಿ
Comments

ಮಾಸ್ಕೊ: ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ತೆರಳಿದ್ದ ‘ಸೊಯುಜ್‌’ ಅಂತರಿಕ್ಷ ನೌಕೆಯು ಕುಜಕಿಸ್ತಾನದ ನಿರ್ಜನ ಪ‍್ರದೇಶದಲ್ಲಿ ಸುರಕ್ಷಿತವಾಗಿ ಸೋಮವಾರ ಇಳಿದಿದೆ. ನೌಕೆಯಲ್ಲಿ ರಷ್ಯಾದ ಇಬ್ಬರು ಮತ್ತು ಅಮೆರಿಕದ ಒಬ್ಬರು ಇದ್ದರು.

ಒಲೆಗ್ ನೊವಿಟ್ಸ್ಕೈ, ನಿಕೊಲಾಯ್‌ ಚುಬ್ ಅವರು ಸುದೀರ್ಘ 374 ದಿನಗಳನ್ನು ಬಾಹ್ಯಾಕಾಶ ಕೇಂದ್ರದಲ್ಲಿ ಕಳೆದಿದ್ದಾರೆ. ಇದರೊಂದಿಗೆ  ದಾಖಲೆಗಳನ್ನು ಮುರಿದು ಸುದೀರ್ಘ ಕಾಲ ಬಾಹ್ಯಾಕಾಶ ಕೇಂದ್ರದಲ್ಲಿ ಜೀವಿಸಿದ ಮೊದಲಿಗರು ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ. ನೌಕೆಯಲ್ಲಿ ಅಮೆರಿಕದ ಟ್ರೇಸಿ ಡೈಸನ್‌ ಅವರೂ ಇದ್ದರು. ಇವರು ಕಳೆದ ಆರು ತಿಂಗಳಿನಿಂದ ಬಾಹ್ಯಾಕಾಶ ಕೇಂದ್ರದಲ್ಲಿ ಇದ್ದರು.

ಸುನಿತಾ ವಿಲಿಯಮ್ಸ್‌ ಸೇರಿ ಇನ್ನೂ ಎಂಟು ಗಗನಯಾತ್ರಿಗಳು ಬಾಹ್ಯಾಕಾಶ ಕೇಂದ್ರದಲ್ಲಿಯೇ ಉಳಿದಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT