ವಾಷಿಂಗ್ಟನ್: ಹಾಸ್ಯ ಚಕ್ರವರ್ತಿ ಚಾರ್ಲಿ ಚಾಪ್ಲಿನ್ ಅವರ ಪುತ್ರಿ, ನಟಿ ಜೋಸೆಫೀನ್ ಚಾಪ್ಲಿನ್ ನಿಧನರಾಗಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು.

ಜೋಸೆಫೀನ್ ಅವರು ಜುಲೈ 13ರಂದು ಪ್ಯಾರಿಸ್‌ನಲ್ಲಿ ನಿಧನರಾದರು ಎಂದು ಕುಟುಂಬಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.

ಜೋಸೆಫೀನ್ ಅವರು ಮೂವರು ಗಂಡು ಮಕ್ಕಳನ್ನು ಅಗಲಿದ್ದಾರೆ.

1949ರ ಮಾರ್ಚ್ 28ರಂದು ಕ್ಯಾಲಿಫೋರ್ನಿಯಾದ ಸಾಂಟಾ ಮೋನಿಕಾದಲ್ಲಿ ಜನಿಸಿದ ಜೋಸೆಫೀನ್, ಚಾರ್ಲಿ ಚಾಪ್ಲಿನ್ ಮತ್ತು ಊನಾ ದಂಪತಿಗೆ ಜನಿಸಿದ ಎಂಟು ಮಕ್ಕಳಲ್ಲಿ ಮೂರನೆಯವರಾಗಿದ್ದಾರೆ.

1952ರಲ್ಲಿ ಚಾಪ್ಲಿನ್ ಅವರ ‘ಲೈಮ್‌ಲೈಟ್’ ಚಿತ್ರದಲ್ಲಿ ನಟಿಸುವ ಮೂಲಕ ಜೋಸೆಫೀನ್ ಸಿನಿಮಾ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ಬಳಿಕ ಅವರು ಅನೇಕ ಚಿತ್ರಗಳಲ್ಲಿ ನಟಿಸಿದ್ದರು.

1972ರಲ್ಲಿ ಪಿಯರ್ ಪಾವೊಲೊ ಪಸೊಲಿನಿಯ ಪ್ರಶಸ್ತಿ ವಿಜೇತ 'ದಿ ಕ್ಯಾಂಟರ್ಬರಿ ಟೇಲ್ಸ್' ಮತ್ತು ರಿಚರ್ಡ್ ಬಾಲ್ಡುಸಿಯ ‘ಎಲ್’ ಒಡೆರ್ ಡೆಸ್ ಫೌವ್ಸ್ ಚಿತ್ರಗಳಲ್ಲಿ ಅಭಿನಯಿಸಿದ್ದರು. ಆದೇ ವರ್ಷ ಮೆನಾಹೆಮ್ ಗೋಲನ್ ನಾಟಕ ‘ಎಸ್ಕೇಪ್ ಟು ದಿ ಸನ್’ ಸೋವಿಯತ್ ಯೂನಿಯನ್ ಬಗ್ಗೆ ಲಾರೆನ್ಸ್ ಹಾರ್ವೆ ಅವರೊಂದಿಗೆ ನಟಿಸಿದ್ದರು. ಬಳಿಕ 1984ರಲ್ಲಿ ಕೆನಡಾದ ನಾಟಕ ‘ದಿ ಬೇ ಬಾಯ್’ನಲ್ಲಿ ನಟಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.