ನ್ಯೂಯಾರ್ಕ್ (ಎಪಿ): ಬಿಸಿಸಿ ಮತ್ತು ದಿ ನ್ಯೂಯಾರ್ಕ್ ಟೈಮ್ಸ್ ಸುದ್ದಿ ಮಾಧ್ಯಮ ಸಂಸ್ಥೆಗಳ ಮಾಜಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಮಾರ್ಕ್ ಥಾಂಪ್ಸನ್ ಅವರು ಸಿಎನ್ಎನ್ ಮಾಧ್ಯಮ ಸಂಸ್ಥೆಯ ನೂತನ ಮುಖ್ಯಸ್ಥ ಮತ್ತು ಸಿಇಒ ಆಗಿ ನೇಮಿಸಲಾಗಿದೆ.

ಸಿಎನ್ಎನ್ ಜಾಲದ ಮಾತೃಸಂಸ್ಥೆಯಾದ ‘ವಾರ್ನರ್ ಬ್ರೋಸ್’ನ ಮುಖ್ಯಸ್ಥ ಡೇವಿಡ್ ಝಾಸ್ಲಾವ್ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ಸಿಎನ್ಎನ್ ಸಿಇಒ ಸ್ಥಾನದಿಂದ ಕ್ರಿಸ್ ಲಿಚ್ತ್ ಅವರನ್ನು ಜೂನ್ನಲ್ಲಿ ವಜಾಗೊಳಿಸಲಾಗಿತ್ತು. ಆ ಸ್ಥಾನಕ್ಕೆ ಥಾಮ್ಸನ್ ಅವರನ್ನು ಆಯ್ಕೆ ಮಾಡಲಾಗಿದೆ.

ಕಳೆದ ಎರಡು ವರ್ಷಗಳಿಂದ ಸಿಎನ್ಎನ್ ವಾಹಿನಿಯ ರೇಟಿಂಗ್ನಲ್ಲಿ ಇಳಿಕೆಯಾಗುವುದರ ಜೊತೆಗೆ, ಸಂಸ್ಥೆಯು ನಷ್ಟವನ್ನೂ ಅನುಭವಿಸಿತ್ತು. ಸಿಎನ್ಎನ್ಅನ್ನು ಯಶಸ್ಸಿನ ಹಳಿಗೆ ಪುನಃ ತರುವ ನಿಟ್ಟಿನಲ್ಲಿ ಥಾಂಪ್ಸನ್ ಅವರನ್ನು ನೇಮಿಸಲಾಗಿದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.