ರಷ್ಯಾದಲ್ಲಿ ಶ್ವಾನಗಳ ಫಿಟ್ನೆಸ್ ಬಹಳ ಪ್ರಾಮುಖ್ಯತೆ ಪಡೆಯುತ್ತಿದ್ದು, ಶ್ವಾನಗಳ ಫಿಟ್ನೆಸ್ ಸ್ಟುಡಿಯೋಗಳು ತುಂಬಾ ಜನಪ್ರಿಯವಾಗುತ್ತಿವೆ. ನಿಯಮಿತ ವ್ಯಾಯಾಮದ ಮೂಲಕ ಶ್ವಾನಗಳ ಆರೋಗ್ಯ ಕಾಪಾಡುವಲ್ಲಿ ಈ ಸ್ಟುಡಿಯೋಗಳು ಸಹಕಾರಿಯಾಗಿವೆ. ಅಲ್ಲದೆ, ಸಾಕುಪ್ರಾಣಿಗಳಿಗೆ ಆದ ಗಾಯಗಳು ಮತ್ತು ಶಸ್ತ್ರಚಿಕಿತ್ಸೆಗಳಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಅಗತ್ಯವಾದ ಎಲ್ಲ ಸೌಕರ್ಯಗಳನ್ನು ಈ ಸ್ಟುಡಿಯೋಗಳು ಹೊಂದಿವೆ. ನಾಯಿಗಳಿಗೆ ಇಲ್ಲಿ ಫಿಟ್ನೆಸ್ ಬಾಲ್ಗಳು, ವ್ಯಾಯಾಮ ಉಪಕರಣಗಳು, ಮ್ಯಾಟ್ಗಳು ಮಾತ್ರವಲ್ಲದೆ ಮಸಾಜ್ ವ್ಯವಸ್ಥೆಯೂ ಇದೆ. ವಿವಿಧ ಸ್ಫರ್ಧೆಗಳಿಗೆ ನಾಯಿಗಳನ್ನು ಸಜ್ಜುಗೊಳಿಸುವುದಕ್ಕೂ ಈ ಸ್ಟುಡಿಯೊಗಳಲ್ಲಿ ವ್ಯವಸ್ಥೆ ಇರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.