ವಾಷಿಂಗ್ಟನ್: ಮಕ್ಕಳಿಗೆ ನೀಡುವ ಫೈಜರ್ ಕೋವಿಡ್ ಲಸಿಕೆಯು ಪ್ರಾಥಮಿಕ ಹಂತದ ಮಕ್ಕಳಲ್ಲಿ ಸೋಂಕಿನ ಲಕ್ಷಣಗಳನ್ನು ತಡೆಯುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ. ಅಡ್ಡಪರಿಣಾಮಗಳು ಉಂಟಾಗುವುದಿಲ್ಲ ಎಂದು ಅಮೆರಿಕದ ಫೆಡರಲ್ ಆರೋಗ್ಯ ನಿಯಂತ್ರಕರು ಶುಕ್ರವಾರ ಹೇಳಿದ್ದಾರೆ.

ದೇಶದ 5 ರಿಂದ 11 ವಯಸ್ಸಿನಸರಿ ಸುಮಾರು 2.8 ಕೋಟಿ ಮಕ್ಕಳಿಗೆ ಲಸಿಕೆಗಳು ಸಿದ್ಧವಾಗಿವೆಯೇ ಎಂಬ ಕುರಿತ ಚರ್ಚೆಗೆ ಮುಂದಿನ ವಾರ ನಡೆಯುವ ತಜ್ಞರ ಸಭೆಗೆ ಮೊದಲು ಆಹಾರ ಮತ್ತು ಔಷಧ ನಿಯಂತ್ರಕ (ಎಫ್ಡಿಎ) ಸಂಸ್ಥೆಯು ಫೈಜರ್ ಲಸಿಕೆ ಕುರಿತ ದತ್ತಾಂಶ ವಿಶ್ಲೇಷಣೆಯನ್ನು ಪೋಸ್ಟ್ ಮಾಡಿದೆ.

ಯುವಜನರಿಗೆ ಲಸಿಕೆ ನೀಡುವ ಪ್ರಕ್ರಿಯೆಗೆ ಅಮೆರಿಕ ಈಗಾಗಲೇ ಚಾಲನೆ ನೀಡಿದೆ. ಆಸ್ಪತ್ರೆಗೆ ದಾಖಲಾಗಬೇಕಾದ ಸಾಧ್ಯತೆ ಮತ್ತು ಕೋವಿಡ್ನಿಂದ ಸಾವು ಸಂಭವಿಸುವ ಸಾಧ್ಯತೆಗಳನ್ನು ಲಸಿಕೆ ತಡೆಯಲಿದೆ. ಇದು ಮಕ್ಕಳಲ್ಲಿ ಯಾವುದೇ ರೀತಿಯ ಗಂಭೀರ ಅಡ್ಡ ಪರಿಣಾಮ ಬೀರುವುದಿಲ್ಲ ಎಂದು ಎಫ್ಡಿಎ ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ.

ಆದರೆ ಸಂಸ್ಥೆಯ ವಿಮರ್ಶಕರು ಮಕ್ಕಳಿಗೆ ನೀಡಲು ಫೈಜರ್ ಲಸಿಕೆಗೆ ಮಾನ್ಯತೆ ನೀಡಲು ಅನುಮತಿ ನೀಡಿಲ್ಲ. ಅಂತಿಮ ತೀರ್ಮಾನಕ್ಕೆ ಮುನ್ನ ಸ್ವತಂತ್ರ ಸಲಹೆಗಾರರಿರುವ ತಜ್ಞರ ಸಮಿತಿಯ ಸಲಹೆಯನ್ನು ಪಡೆಯಲಿದೆ.

ಎಫ್ಡಿಎ ಸಮಿತಿಯು ಫೈಜರ್ ಲಸಿಕೆಗೆ ಮಾನ್ಯ ಮಾಡಿದರೆ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರವು ನವೆಂಬರ್ ಮೊದಲ ವಾರ ಯಾರಿಗೆ ನೀಡಬೇಕು ಎಂದು ಶಿಫಾರಸು ಮಾಡಲಿದೆ.

12 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಈಗಾಗಲೇ ಫೈಜರ್ ಲಸಿಕೆಗಳನ್ನು ಶಿಫಾರಸು ಮಾಡಲಾಗಿದೆ. ಶಾಲೆಗೆ ಕಳುಹಿಸುವ ಮುನ್ನ ಮಕ್ಕಳಿಗೆ ಸೋಂಕಿನಿಂದ ರಕ್ಷಣೆ ಒದಗಿಸಲು ಪೋಷಕರು ಹೆಚ್ಚು ಕಾತರರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.