ಇಸ್ಲಾಂ ಖಲ: ಅಫ್ಗಾನಿಸ್ತಾನ ಮತ್ತು ಇರಾನ್ ಗಡಿ ಪ್ರದೇಶ ಬಳಿಯ ಬಂದರು ಪ್ರದೇಶದಲ್ಲಿ ಭಾರಿ ಅಗ್ನಿ ಆಕಸ್ಮಿಕ ಸಂಭವಿಸಿದ್ದು, 100ಕ್ಕೂ ಅಧಿಕ ತೈಲ ಟ್ಯಾಂಕರ್‌ಗಳು ಭಸ್ಮವಾಗಿವೆ.

‘ಇದು ಇರಾನ್‌ನೊಂದಿಗಿನ ಅಫ್ಗಾನಿಸ್ತಾನದ ಅತಿ ದೊಡ್ಡ ವ್ಯಾಪಾರವಾಗಿತ್ತು.ಆದರೆ ಈ ಬೆಂಕಿಅವಘಡದಿಂದಾಗಿ ಅಫ್ಗಾನಿಸ್ತಾನಕ್ಕೆ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

‘ಹೇರತ್‌ನಿಂದ 120 ಕಿ.ಮೀ ದೂರದಲ್ಲಿರುವಇಸ್ಲಾಂಖಲ ಬಂದರಿನಲ್ಲಿ ಶನಿವಾರ ಸಂಜೆ ದೊಡ್ಡ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸದ್ಯ ಬೆಂಕಿಯನ್ನು ಭಾಗಶಃ ನಂದಿಸಲಾಗಿದ್ದು, ಈ ಬಗ್ಗೆ ತನಿಖೆ ಆರಂಭಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

ಇಸ್ಲಾಂಖಲವು ಅಫ್ಗಾನಿಸ್ತಾನದ ಪ್ರಮುಖ ಬಂದರುಗಳಲ್ಲಿ ಒಂದಾಗಿದೆ. ಅಮೆರಿಕವು ಇರಾನ್ ಮೇಲೆ ನಿರ್ಬಂಧ ಹೇರಿದೆ. ಈ ನಡುವೆಯೂ ಅಫ್ಗಾನಿಸ್ತಾನವು ಅಮೆರಿಕದ ಅನುಮತಿ ಪಡೆದು ಇರಾನ್‌ನಿಂದ ತೈಲವನ್ನು ಆಮದು ಮಾಡಿಕೊಂಡಿತ್ತು.

ಇದನ್ನೂ ಓದಿ:ಟೆಕ್ಸಾಸ್: ಸುಮಾರು 100 ವಾಹನಗಳ ಡಿಕ್ಕಿ, ಐವರು ಸಾವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.