ಕೊಲಂಬೊ: ಶ್ರೀಲಂಕಾ ಮಾಜಿ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರು ತಲೆಮರೆಸಿಕೊಂಡಿಲ್ಲ, ಸಿಂಗಪುರದಿಂದ ದೇಶಕ್ಕೆ ವಾಪಸಾಗುವ ನಿರೀಕ್ಷೆ ಇದೆ ಎಂದು ಕ್ಯಾಬಿನೆಟ್ ವಕ್ತಾರ ಬಂದುಲಾ ಗುಣವರ್ಧೆನ ಅವರು ಮಂಗಳವಾರ ತಿಳಿಸಿದ್ದಾರೆ.

ವಾರದ ಕ್ಯಾಬಿನೆಟ್ ಮಾಧ್ಯಮಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದ್ದರೂ, ಗೊಟಬಯ ಅವರು ಯಾವಾಗ ವಾಪಸಾಗುತ್ತಾರೆ ಎಂಬುದನ್ನು ನಿರ್ದಿಷ್ಟವಾಗಿ ತಿಳಿಸಿಲ್ಲ.

ಶ್ರೀಲಂಕಾದಲ್ಲಿ ಉಂಟಾದ ಆರ್ಥಿಕ ಬಿಕ್ಕಟ್ಟಿಗೆ ಗೊಟಬಯ ಅವರೇ ಕಾರಣ ಎಂದು ಆರೋಪಿಸಿದ್ದ ಜನರು, ಜುಲೈ 9ರಂದು ಅಧ್ಯಕ್ಷರ ಅಧಿಕೃತ ನಿವಾಸಕ್ಕೆ ನುಗ್ಗಿ ಪ್ರತಿಭಟಿಸಿದ್ದರು. ಪ್ರತಿಭಟನೆಗೆ ಬೆದರಿ ಮೊದಲು ಮಾಲ್ಡೀವ್ಸ್ಗೆ ತೆರಳಿದ್ದ ಗೊಟಬಯ ಅವರು, ಬಳಿಕ ಸಿಂಗಪುರಕ್ಕೆ ಪಲಾಯನ ಮಾಡಿದ್ದರು. ಸಿಂಗಪುರವು ಅವರಿಗೆ14 ದಿನಗಳ ತಾತ್ಕಾಲಿಕ ಭೇಟಿಗೆ ಪಾಸ್ ನೀಡಿದೆ.

ಲಂಕಾದಲ್ಲಿ ಪ್ರಜಾಪ್ರಭುತ್ವ ಮೂಲಕ ಸ್ಥಿರತೆ, ಆರ್ಥಿಕ ಚೇತರಿಕೆ: ಪ್ರಧಾನಿ ಮೋದಿ ಆಶಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.