ಕೊಲಂಬಿಯಾ: ವಿಮಾನ ಪತನಗೊಂಡ 17 ದಿನಗಳ ನಂತರ ಕೊಲಂಬಿಯಾದ ಅಮೆಜಾನ್ ದಟ್ಟಾರಣ್ಯದಲ್ಲಿ ಹನ್ನೊಂದು ತಿಂಗಳ ಮಗು ಸೇರಿ ನಾಲ್ಕು ಮಕ್ಕಳು ಪತ್ತೆಯಾಗಿದ್ದು, ಈ ಬಗ್ಗೆ ಕೊಲಂಬಿಯಾ ಅಧ್ಯಕ್ಷರು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.

‘ಕಠಿಣ ಶೋಧ ಕಾರ್ಯಾಚರಣೆಯ ನಂತರ ನಮ್ಮ ಸೇನೆ ಮಕ್ಕಳನ್ನು ಪತ್ತೆ ಮಾಡಿದೆ. ಗುವಿಯಾರ್ನಲ್ಲಿ ವಿಮಾನ ಅಪಘಾತದಲ್ಲಿ ಕಣ್ಮರೆಯಾಗಿದ್ದ 4 ಮಕ್ಕಳನ್ನು ನಾವು ಜೀವಂತವಾಗಿ ಪತ್ತೆ ಮಾಡಿದ್ದೇವೆ. ಇದು ನಾಡಿಗೆ ಸಂತಸದ ಸುದ್ದಿಯಾಗಿದೆ‘ ಎಂದು ಟ್ವಿಟರ್ನಲ್ಲಿ ಕೊಲಂಬಿಯಾ ಅಧ್ಯಕ್ಷ ಗುಸ್ಟಾವೊ ಪೆಟ್ರೋ ಬರೆದುಕೊಂಡಿದ್ದಾರೆ.

ಮೇ 1ರಂದು ಕೊಲಂಬಿಯಾದ ಅಮೆಜಾನ್ ದಟ್ಟಾರಣ್ಯದಲ್ಲಿ ವಿಮಾನವೊಂದು ಪತನಗೊಂಡಿತ್ತು. ಪತನಗೊಂಡ ಜಾಗದಲ್ಲಿ ಕೊಲಂಬಿಯಾ ಸೇನೆ ‘ಆಪರೇಷನ್ ಆನ್ ಹೋಪ್‘ ಎಂಬ ಹೆಸರಿನಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದು, ಸೋಮವಾರ ಮೂವರ ಮೃತದೇಹ ಪತ್ತೆಯಾಗಿತ್ತು. ಮಕ್ಕಳ ಮೃತದೇಹ ಪತ್ತೆಯಾಗದ ಹಿನ್ನೆಲೆ ಸೇನೆ ಶೋಧ ಕಾರ್ಯಾಚರಣೆಯನ್ನು ಮುಂದುವರಿಸಿತ್ತು.

ಇದೀಗ ಸೇನೆ ಮಕ್ಕಳನ್ನು ಪತ್ತೆ ಮಾಡಿದ್ದು, ವಿಮಾನ ಪತನದಲ್ಲಿ ಕಾಣೆಯಾದ ಲೆಸ್ಲಿ ಮುಕುಟುಯ್ (13 ), ಸೊಲೀನಿ ಮುಕುಟುಯ್ (19), ಟೈನ್ ನೊರಿಯಲ್ ರೊನೊಕ್ ಮುಕುಟುಯ್ (4) ಮತ್ತು ಕ್ರಿಸ್ಟಿನ್ ನೆರಿಮನ್ ರಾನೋಕ್ ಮುಕುಟುಯ್ (11 ತಿಂಗಳು) ಸೇನೆಗೆ ಜೀವಂತವಾಗಿ ಸಿಕ್ಕಿದ್ದಾರೆ ಎಂದು ತಿಳಿದು ಬಂದಿದೆ.

‘ಮಕ್ಕಳನ್ನು ಪತ್ತೆ ಮಾಡಿರುವ ಬಗ್ಗೆ ಕೊಲಂಬಿಯಾ ಸೇನೆ ಅಧಿಕೃತವಾಗಿ ದೃಢಪಡಿಸಿಲ್ಲ. ಮಕ್ಕಳನ್ನು ಸಂಪರ್ಕ ಮಾಡಿರುವ ಬಗ್ಗೆ ಸರ್ಕಾರಿ ಏಜೆನ್ಸಿಯಿಂದ ಮಾಹಿತಿ ಬಂದಿದೆ ಅಷ್ಟೆ‘ ಎಂದು ಕೊಲಂಬಿಯಾದ ಸುದ್ದಿ ವಾಹಿನಿಯೊಂದು ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.