ಜರ್ಮನಿ: ಜರ್ಮನಿಯ ಡಸೆಲ್ಡಾರ್ಫ್ ನಗರದಲ್ಲಿ ಎರಡನೇ ವಿಶ್ವಯುದ್ಧ ಕಾಲದ್ದು ಎನ್ನಲಾದ ಬಾಂಬ್ ಪತ್ತೆಯಾಗಿದ್ದು, ನಗರದಲ್ಲಿನ 13 ಸಾವಿರ ಜನರನ್ನು ಅಧಿಕಾರಿಗಳು ತಾತ್ಕಾಲಿಕವಾಗಿ ಸ್ಥಳಾಂತರಗೊಳಿಸಿದ್ದಾರೆ.

ಸ್ಫೋಟಗೊಂಡಿರದ ಬಾಂಬ್ನ್ನು ವಿಫಲಗೊಳಿಸಲು ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ತಂಡ ಸ್ಥಳಕ್ಕೆ ಧಾವಿಸಿದೆ.

ಬಾಂಬ್ ಪತ್ತೆಯಾದ 500 ಮೀಟರ್ ಅಂತರದಲ್ಲಿನ ಎಲ್ಲರನ್ನೂ ಸ್ಥಳಾಂತರಗೊಳ್ಳುವಂತೆ ಸೂಚಿಸಲಾಗಿದೆ.

ಒಂದು ಟನ್ ತೂಕದ ಶೆಲ್ ಅನ್ನು ಆಗಸ್ಟ್ 7-8 ರಂದು ಪತ್ತೆ ಮಾಡಲಾಗಿತ್ತು. ನಗರದ ಮೃಗಾಲಯದ ಬಳಿ ಕೆಲಸದ ಸಮಯದಲ್ಲಿ ಇದು ಪತ್ತೆಯಾಗಿದೆ ಎಂದು ಅಧಿಕಾರಿಗಳ ಹೇಳಿಕ ಉಲ್ಲೇಖಿಸಿ ವರದಿಯಾಗಿದೆ.

ವಿಶ್ವಯುದ್ಧಗಳ ವೇಳೆ ಉಳಿದಿರುವ ಸಾವಿರಾರು ಬಾಂಬ್ಗಳನ್ನು ಇನ್ನೂ ಜರ್ಮನಿಯಲ್ಲಿ ಹೂಳಲಾಗಿದೆ ಎಂದು ವರದಿಯಾಗಿದೆ.

2017ರಲ್ಲಿ ಫ್ರಾಂಕ್ಫರ್ಟ್ ಪ್ರದೇಶದಲ್ಲಿ1.4 ಟನ್ನಷ್ಟು ಬಾಂಬ್ ವಶಪಡಿಸಿಕೊಂಡು, 65 ಸಾವಿರ ಜನರನ್ನು ಸ್ಥಳಾಂತರಗೊಳಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.