ಪೆಶಾವರ: ಪಾಕಿಸ್ತಾನದ ಭದ್ರತಾ ಪಡೆಗಳು ಖೈಬರ್ ಪಖ್ತುಂಖ್ವಾ ಮತ್ತು ಬಲೂಚಿಸ್ತಾನ ಪ್ರಾಂತ್ಯದಲ್ಲಿ ನಡೆಸಿದ ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ 12 ಭಯೋತ್ಪಾದಕರನ್ನು ಹತ್ಯೆಗೈದಿವೆ ಎಂದು ಸೇನೆಯು ಹೇಳಿದೆ.

ಖೈಬರ್ ಪಖ್ತುಂಖ್ವಾದ ಮಿರಾನ್ಶಾಹ ಜಿಲ್ಲೆಯಲ್ಲಿ ನವೆಂಬರ್ 12–13ರಂದು ನಡೆಸಿದ ಮೊದಲ ಕಾರ್ಯಾಚರಣೆಯಲ್ಲಿ ಎಂಟು ಉಗ್ರರನ್ನು ಸದೆಬಡಿಯಲಾಗಿದೆ. ಈ ಸಂದರ್ಭದಲ್ಲಿ ಆರು ಉಗ್ರರು ಗಾಯಗೊಂಡಿದ್ದಾರೆ ಎಂದು ಮಾಹಿತಿ ನೀಡಿದೆ.

ಭದ್ರತಾ ಪಡೆಗಳು ಬಲೂಚಿಸ್ತಾನದ ಕೆಛ್ ಜಿಲ್ಲೆಯಲ್ಲಿ ನಡೆಸಿದ ಎರಡನೇ ಕಾರ್ಯಾಚರಣೆ ವೇಳೆ ಭಯೋತ್ಪಾದಕರ ಅಡಗುದಾಣದ ಮೇಲೆ ದಾಳಿ ನಡೆಸಲಾಗಿತ್ತು. ಉಗ್ರರು ಮತ್ತು ಭದ್ರತಾ ಪಡೆಗಳಿಂದ ನಡೆದ ದಾಳಿ–ಪ್ರತಿದಾಳಿಯಲ್ಲಿ ಸೇನೆಗೆ ಅಗತ್ಯವಾಗಿ ಬೇಕಾಗಿದ್ದ ಸನಾ ಅಲಿಯಾಸ್ ಬರು ಸೇರಿದಂತೆ ನಾಲ್ವರು ಉಗ್ರರು ಹತರಾಗಿದ್ದಾರೆ ಎಂದು ತಿಳಿಸಿದೆ.

ಬರು, ಮಜೀದ್ ಬ್ರಿಗೇಡ್ ಪಡೆಯ ನೇಮಕಾತಿ ಏಜೆಂಟ್ ಆಗಿ ಅದರಲ್ಲೂ ಮುಖ್ಯವಾಗಿ ಆತ್ಮಾಹುತಿ ಬಾಂಬ್ ದಾಳಿಕೋರರ ನೇಮಕಾತಿ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಎಂದು ಸೇನೆ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.