ಲಂಡನ್: ಅಕ್ರಮ ವಲಸಿಗರನ್ನು ಉದ್ದೇಶಪೂರ್ವಕವಾಗಿ ತಮ್ಮ ದೇಶದ ಗಡಿಗಳಿಗೆ ಓಡಿಸುವ ಮೂಲಕ ಶತ್ರು ದೇಶಗಳು ತಮ್ಮ ದೇಶದಲ್ಲಿ ಅಸ್ಥಿರತೆ ಮೂಡಿಸಲು ಯತ್ನಿಸುತ್ತಿವೆ. ವಲಸೆಯನ್ನು ಅವರು ಆಯುಧವಾಗಿ ಬಳಸಬಹುದು ಎಂದು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಎಚ್ಚರಿಕೆ ನೀಡಿದ್ದಾರೆ.

ರೋಮ್‌ನಲ್ಲಿ ನಡೆದ ಇಟಾಲಿಯನ್ ಕನ್ಸರ್ವೇಟಿವ್ಸ್ ಮತ್ತು ಬಲಪಂಥೀಯರ ಸಭೆಯನ್ನುದ್ದೇಶಿಸಿ ಮಾತನಾಡಿದ ಸುನಕ್, ಈ ಸಮಸ್ಯೆಯ ಪರಿಹಾರಕ್ಕಾಗಿ ಕ್ರಮ ತೆಗೆದುಕೊಳ್ಳದಿದ್ದರೆ ಹೆಚ್ಚುತ್ತಿರುವ ವಲಸಿಗರು ಯುರೋಪಿಯನ್ ರಾಷ್ಟ್ರಗಳನ್ನು ವಿನಾಶದಂಚಿಗೆ ತರಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಕ್ರಿಮಿನಲ್ ಗ್ಯಾಂಗ್ಗಳು ನಮ್ಮ ಮಾನವೀಯತೆಯನ್ನು ದುರುಪಯೋಗಪಡಿಸಿಕೊಳ್ಳಲು ಅಡ್ಡದಾರಿ ಹಿಡಿಯುತ್ತಿವೆ. ಅಕ್ರಮ ವಲಸಿಗರನ್ನು ದೋಣಿಗಳ ಮೂಲಕ ತಮ್ಮ ಗಡಿಗಳಿಗೆ ತಲುಪಿಸುವ ಪ್ರಯತ್ನದಲ್ಲಿ ಆ ಜನರ ಜೀವದ ಜತೆ ಚೆಲ್ಲಾಟವಾಡುತ್ತಿವೆ ಎಂದು ಸುನಕ್ ಆರೋಪಿಸಿದ್ದಾರೆ.

ಈ ಸಮಸ್ಯೆಗೆ ಉತ್ತರ ಕಂಡುಕೊಳ್ಳದಿದ್ದರೆ ಅಕ್ರಮ ವಲಸಿಗರ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತದೆ. ಇದು ನಮ್ಮ ದೇಶಗಳ ಮೇಲೆ ವಿಪರೀತ ಹೊರೆಯನ್ನುಂಟು ಮಾಡುತ್ತದೆ. ಇದರಿಂದ ನಿಜವಾಗಿಯೂ ಸಹಾಯದ ಅಗತ್ಯವಿರುವವರಿಗೆ ನಾವು ಸಹಾಯ ಮಾಡಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಲಿದೆ ಎಂದರು.

ಜಾಗತಿಕ ನಿರಾಶ್ರಿತರ ನಿಯಮಗಳಲ್ಲಿ ಬದಲಾವಣೆ ಮಾಡುವುದು ತೀರ ಅಗತ್ಯ. ಈ ಸಮಸ್ಯೆಯನ್ನು ಪರಿಹರಿಸದಿದ್ದರೆ, ದೋಣಿಗಳು ಬರುತ್ತಲೇ ಇರುತ್ತವೆ ಹಾಗೂ ಜನ ಸಮುದ್ರದಲ್ಲಿ ಮುಳುಗಿ ಸಾಯುತ್ತಲೇ ಇರುತ್ತಾರೆ ಎಂದು ಅವರು ಹೇಳಿದರು.
.ಅಕ್ರಮ ವಲಸಿಗರ ಗಡೀಪಾರು: ಬ್ರಿಟನ್ ನೀತಿಗೆ ವಿರೋಧ–ವಲಸೆ ಸಚಿವ ಜೆನ್ರಿಕ್ ರಾಜೀನಾಮೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.