ವಾಷಿಂಗ್ಟನ್: ಫ್ಲಾರಿಡಾದಲ್ಲಿರುವ ಭಾರತೀಯ ಸಂಜಾತ 8ನೇ ತರಗತಿ ವಿದ್ಯಾರ್ಥಿ ದೇವ್ ಶಾ ಅವರು 2023ನೇ ಸಾಲಿನ ಸ್ಕ್ರಿಪ್ಸ್ ನ್ಯಾಷನಲ್ ಸ್ಪೆಲ್ಲಿಂಗ್ ಬೀ ಸ್ಪರ್ಧೆಯಲ್ಲಿ ಗೆದ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ.

14 ವರ್ಷದ ದೇವ್ ಅವರು ಸೆಮೊಪೈಯಲ್ (psammophile) ಪದವನ್ನು ಉಚ್ಛರಿಸುವ ಮೂಲಕ ಈ ಸ್ಪರ್ಧೆಯಲ್ಲಿ ಗೆದ್ದಿದ್ದು, ₹41.14 ಲಕ್ಷ ಮೊತ್ತವನ್ನು ತನ್ನದಾಗಿಸಿಕೊಂಡಿದ್ದಾರೆ ಎಂದೂ ಹೇಳಿವೆ.

ಪ್ರತಿಷ್ಟಿತ ಸ್ಪೆಲ್ಲಿಂಗ್ ಬೀ ಸ್ಪರ್ಧೆಯಲ್ಲಿ ಭಾರತ ಸಂಜಾತ ಮಕ್ಕಳೇ ಪಾರಮ್ಯ ಸಾಧಿಸುತ್ತಿದ್ದಾರೆ.

'ಕಳೆದ ಮೂರು ವರ್ಷಗಳಿಂದ ಈ ಸ್ಪರ್ಧೆಗಾಗಿ ಸಿದ್ಧತೆ ನಡೆಸಿದ್ದೆ. ಅಂತಿಮವಾಗಿ ಗೆಲುವು ನನ್ನದಾಗಿರುವುದರಿಂದ ಖುಷಿಯಾಗಿದೆ’ ಎಂದು ದೇವ್ ಪ್ರತಿಕ್ರಿಯಿಸಿದ್ದಾರೆ.

ದೇವ್ ಅವರು 2019 ಮತ್ತು 2021ರಲ್ಲೂ ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಆದರೆ, ಮೂರನೇ ಪ್ರಯತ್ನದಲ್ಲಿ ಜಯಶಾಲಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.